ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಈವರೆಗೂ ಕಪ್ ಕನಸಾಗಿದೆ. ಆದ್ರೆ ಈ ಬಾರಿ ಕಪ್ ನಮ್ಮದೆ ಎಂಬ ಅಭಿಪ್ರಾಯ ವ್ಯಕ್ತವಾಗ್ತಿದೆ. ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಭರವಸೆ ಮಾತುಗಳನ್ನಾಡಿದ್ದಾರೆ.
ಇಷ್ಟು ದಿನ ರಾಯಲ್ ಚಾಲೆಂಜರ್ಸ್ ಕಾಗದದ ಮೇಲೆ ಆಡ್ತಿತ್ತು. ಆದ್ರೆ ಈ ಬಾರಿ ಆರನ್ ಫಿಂಚ್ ತಂಡದಲ್ಲಿ ಅಗ್ರ ಕ್ರಮಾಂಕದಲ್ಲಿದ್ದಾರೆ. ಅವರು ಪವರ್‌ಪ್ಲೇನಲ್ಲಿ ಅತ್ಯುತ್ತಮ ಆಟಗಳನ್ನು ಪ್ರದರ್ಶಿಸಬಲ್ಲರು. ಆರಂಭಿಕ ಸ್ಕೋರ್ ಮಾಡುವ ನಿರೀಕ್ಷೆಯಿದೆ. ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲಿನ ಒತ್ತಡವನ್ನು ಇವರು ತೆಗೆಯಬಹುದೆಂದು ಹಾಗ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 13 ಸರಣಿ ಸೆಪ್ಟೆಂಬರ್ 19 ರಿಂದ ನವೆಂಬರ್ 8 ರವರೆಗೆ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಂತರ ಹಾಲಿ ವಿಜೇತ ಮುಂಬೈ ಇಂಡಿಯನ್ಸ್ ಪ್ರಶಸ್ತಿಗೆ ಸ್ಪರ್ಧಿಸುವ ಪ್ರಬಲ ತಂಡವಾಗಿದೆ ಎಂದು ಹಾಗ್ ಹೇಳಿದ್ದಾರೆ.