ಇಂದು ಅಬುಧಾಬಿಯಲ್ಲಿ ಐಪಿಎಲ್ ನ ಕ್ವಾಲಿಫೈಯರ್ 2 ನಡೆಯಲಿದ್ದು, ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಲಿದೆ.
ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ನ ಎಲಿಮಿನೇಟರ್ ಪಂದ್ಯದಲ್ಲಿ ಆರ್.ಸಿ.ಬಿ. ತಂಡದ ಮೇಲೆ ಭರ್ಜರಿ ಜಯ ಸಾಧಿಸಿದ್ದು ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಕ್ವಾಲಿಫೈಯರ್ 1 ರಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡಿದ್ದು ಇಂದು ಗೆಲುವಿನ ಲಯಕ್ಕೆ ಮರಳುವ ಹುಮ್ಮಸ್ಸಿನಲ್ಲಿದ್ದಾರೆ. ತನ್ನ ಚೊಚ್ಚಲ ಐಪಿಎಲ್ ನ ಆಸೆಯನ್ನು ಜೀವಂತವಾಗಿಸಿಕೊಳ್ಳುತ್ತಾ ಕಾದು ನೋಡಬೇಕಾಗಿದೆ.
ಇಂದು ಗೆದ್ದವರು ಫೈನಲ್ ನಲ್ಲಿ ಮುಂಬೈ ಇಂಡಿಯನ್ಸ್ ಗೆ ಎದುರಾಳಿಯಾಗಲಿದ್ದು ಉಭಯ ತಂಡಗಳ ನಡುವೆ ರೋಚಕ ಪಂದ್ಯ ನಡೆಯುವ ಸಾಧ್ಯತೆ ಇದೆ.