
ಇಂದು ಕ್ಯಾನ್ ಬೆರಾದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿಟ್ವೆಂಟಿ ಸರಣಿಯ ಮೊದಲನೇ ಪಂದ್ಯ ನಡೆಯಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ತಂಡ ವಶಪಡಿಸಿಕೊಂಡಿದ್ದು ಇದೀಗ ಟಿ ಟ್ವೆಂಟಿ ಸರಣಿಯನ್ನು ಭಾರತ ಗೆಲ್ಲುತ್ತಾ ಕಾದುನೋಡಬೇಕಾಗಿದೆ.
ಟಿ ಟ್ವೆಂಟಿ ಐಸಿಸಿ ರ್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯಾ ತಂಡ 2ನೇ ಸ್ಥಾನದಲ್ಲಿದ್ದರೆ ಭಾರತ ಮೂರನೇ ಸ್ಥಾನದಲ್ಲಿದೆ. ಒಟ್ಟು ಮೂರು ಟ್ವೆಂಟಿ ಪಂದ್ಯಗಳು ನಡೆಯಲಿದ್ದು, ಇಂದು 1-40ಕ್ಕೆ ಟಿ ಟ್ವೆಂಟಿಯ ಮೊದಲನೇ ಪಂದ್ಯ ಆರಂಭವಾಗಲಿದೆ.