ಭಾರತ ಕ್ರಿಕೆಟ್ ಇತಿಹಾಸದಲ್ಲಿ ಇಂದಿನ ದಿನಾಂಕ ಐತಿಹಾಸಿಕ ದಿನ. ಭಾರತೀಯರು ಎಂದಿಗೂ ಜೂನ್ 25 ಮರೆಯುವಂತಿಲ್ಲ. ಮೂವತ್ತೇಳು ವರ್ಷಗಳ ಹಿಂದೆ ಇದೇ ದಿನ ಟೀಂ ಇಂಡಿಯಾ ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದು ಇಡೀ ಭಾರತವೇ ಬೀಗಿತ್ತು. ಇಂದು ಮತ್ತೆ ಆ ದಿನವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಭಾರತೀಯರು.
ಕ್ರಿಕೆಟ್ ಕಾಶಿ ಎಂದೇ ಪ್ರಖ್ಯಾತವಾದ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ 1983ರ ಜೂನ್ 25ರಂದು ಮೂರನೇ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆದಿತ್ತು. ಈ ವೇಳೆ ಎರಡು ಬಾರಿ ವಿಜೇತವಾಗಿದ್ದ ವೆಸ್ಟ್ ಇಂಡೀಸ್ ತಂಡವನ್ನು ಭಾರತವು 43 ರನ್‍ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. ನಿಜಕ್ಕೂ ಆ ಘಳಿಗೆಯನ್ನ ಅಲ್ಲಿ ನೆರೆದಿದ್ದ ಯಾರೂ ಕೂಡ ಮರೆಯುವಂತಿಲ್ಲ.
ಫೈನಲ್ ಪಂದ್ಯದಲ್ಲಿ ವಿಂಡೀಸ್ ಬೌಲರ್‌ಗಳ ದಾಳಿಯಲ್ಲಿ ಭಾರತವು 54.5 ಓವರ್‌ಗಳಲ್ಲಿ 183 ರನ್‍ಗಳಿಗೆ ಆಲ್ ಔಟ್ ಆಗಿತ್ತು. ವಿಂಡೀಸ್ ತಂಡಕ್ಕೆ 183 ರನ್‍ಗಳ ಗುರಿಯನ್ನು ನೀಡಿತ್ತು. ವಿಂಡೀಸ್ ತಂಡ 140 ರನ್‍ಗಳಿಗೆ ಆಲ್ ಔಟ್ ಆದರು. ಹೀಗಾಗಿ ಭಾರತ ಜಯಗಳಿಸಿತ್ತು.