ಈ ಬಾರಿ ಐಪಿಎಲ್ ನಲ್ಲಿ ಎಲ್ಲಾ ಪಂದ್ಯಗಳು ರೋಚಕತೆಯಿಂದ ಸಾಗುತ್ತಿವೆ. ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ಇಯಾನ್ ಮೋರ್ಗನ್ ನಾಯಕತ್ವದ ಕೆಕೆಆರ್ ತಂಡ ಮುಖಾಮುಖಿಯಾಗುತ್ತಿವೆ, ಇದು ಐಪಿಎಲ್ ನ 18ನೇ ಪಂದ್ಯವಾಗಿದ್ದು ಎರಡು ತಂಡಗಳು ಗೆಲುವಿನ ಹುಡುಕಾಟದಲ್ಲಿದ್ದಾರೆ.
ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಬ್ಯಾಟಿಂಗ್ ನಲ್ಲಿ ಬಲಿಷ್ಟವಾಗಿದ್ದರೂ ಬ್ಯಾಟ್ಸ್‌ಮನ್ ಗಳು ಎಡವುತ್ತಿದ್ದಾರೆ, ಇನ್ನು ಜೋಫ್ರಾ ಆರ್ಚರ್ ಅಲಭ್ಯರಾಗಿರುವುದು ತಂಡಕ್ಕೆ ಬೇಸರ ತಂದಿದೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್
ಇಯಾನ್ ಮೊರ್ಗನ್ ನಾಯಕತ್ವದ ಕೆಕೆಆರ್ ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರಂಭದಲ್ಲಿ ಸತತ ವಿಕೆಟ್ ಗಳನ್ನು ಕಳೆದುಕೊಂಡಿತ್ತು ನಂತರ ಬ್ಯಾಟಿಂಗ್ ಗಿಳಿದ ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ಅವರ ಬರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಪೈಪೋಟಿ ನೀಡುವ ಮೂಲಕ ಸೋಲು ಕಂಡಿತ್ತು ಈ ಸ್ಪೋಟಕ ಬ್ಯಾಟಿಂಗ್ ನಿಂದ ಕೆಕೆಆರ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ಈ ಎರಡು ತಂಡಗಳಿಗೂ ಜಯ ಗಳಿಸುವುದು ಅನಿವಾರ್ಯವಾಗಿದೆ ಉಭಯ ತಂಡಗಳು ಕೇವಲ 1 ಪಂದ್ಯದಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋಲು ಕಂಡಿವೆ.