
ಎಂ.ಎಸ್. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಐಪಿಎಲ್ ನಲ್ಲಿ ಅವರ ಆಟ ನೋಡಿ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ.
ಇಂದು ದುಬೈನಲ್ಲಿ ಐಪಿಎಲ್ ನ 14ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಮುಖಾಮುಖಿಯಾಗಿದ್ದು, ಈ ಪಂದ್ಯವನ್ನಾಡಿದ ಧೋನಿ ಅತಿ ಹೆಚ್ಚು ಐಪಿಎಲ್ ಪಂದ್ಯವನ್ನಾಡಿದ ಆಟಗಾರ ಎಂಬ ಹೊಸ ದಾಖಲೆ ಮಾಡಿದ್ದಾರೆ.
ಎಂ.ಎಸ್. ಧೋನಿ ಇದುವರೆಗೂ 193 ಪಂದ್ಯಗಳನ್ನಾಡಿದ್ದಾರೆ. ಇಂದಿನ ಪಂದ್ಯವನ್ನಾಡುವ ಮೂಲಕ ಸುರೇಶ್ ರೈನಾರನ್ನು ಹಿಂದಿಕ್ಕಿ ಧೋನಿ ಮೊದಲನೇ ಸ್ಥಾನಕ್ಕೆ ಬಂದಿದ್ದಾರೆ.