ಶುಕ್ರವಾರದಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ 26ನೇ ಪಂದ್ಯದಲ್ಲಿ ಆರ್.ಸಿ.ಬಿ. ತಂಡದ ನಾಯಕ ವಿರಾಟ್ ಕೋಹ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಆರಂಭದಲ್ಲಿ ಪ್ರಭ್ಸಿಮ್ರಾನ್ 7ರನ್ ಗಳಿಸಿ ಕೈಲ್ ಜೇಮಿಸನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು.
ನಂತರ ಬಂದ ಕ್ರಿಸ್ ಗೇಲ್ 24 ಎಸೆತಗಳಲ್ಲಿ 46ರನ್ ಗಳಿಸಿದ್ದು, ಡೇನಿಯಲ್ ಸ್ಯಾಮ್ಸ್ ಬೌಲಿಂಗ್‌ನಲ್ಲಿ ಔಟಾದರು. ನಾಯಕ ಕೆ.ಎಲ್. ರಾಹುಲ್ 57 ಎಸೆತಗಳಲ್ಲಿ 91ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು. ಪಂಜಾಬ್ ಕಿಂಗ್ಸ್ ತಂಡ ಒಟ್ಟಾರೆ 5 ವಿಕೆಟ್ ನಷ್ಟಕ್ಕೆ 179ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಆರ್.ಸಿ.ಬಿ. ತಂಡದಲ್ಲಿ ದೇವದತ್ ಪಡಿಕ್ಕಲ್ 7ರನ್ ಗಳಿಸಿ ಔಟಾದರೇ ಆರ್.ಸಿ.ಬಿ. ತಂಡದ ನಾಯಕ ವಿರಾಟ್ ಕೋಹ್ಲಿ 35ರನ್ ಗಳಿಸಿದ್ದು ಹರ್ಪಿತ್ ಬ್ರಾರ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಆರ್.ಸಿ.ಬಿ. ತಂಡ ಸತತ ವಿಕೆಟ್ ಗಳನ್ನು ಕಳೆದುಕೊಂಡು 8 ವಿಕೆಟ್ ನಷ್ಟಕ್ಕೆ 145ರನ್ ಗಳಿಸಿತು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡ ಆರ್.ಸಿ.ಬಿ. ವಿರುದ್ಧ 34ರನ್ ಗಳ ಭರ್ಜರಿ ಜಯ ಸಾಧಿಸಿತು. ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಆಲ್ ರೌಂಡರ್ ಹರ್ ಪ್ರೀತ್ ಬ್ರಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.