ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮನೆಗೆ ಹೊಸ ಅತಿಥಿ ಆಗಮನವಾಗಿದೆ ಎರಡು ದಿನಗಳ ಹಿಂದೆ ಹಾರ್ದಿಕ್ ಪಾಂಡ್ಯ ಮನೆಗೆ ಗಂಡು ಮಗು ಬಂದಿರುವ ಬಗ್ಗೆ ಹೇಳಿದ್ದರು. ಈಗ ಅಭಿಮಾನಿಗಳಿಗೆ ಮುದ್ದಾದ ಗಿಫ್ಟ್ ನೀಡಿದ್ದಾರೆ. ನವಜಾತ ಶಿಶುವಿನ ಫೋಟೋ ಪೋಸ್ಟ್ ಮಾಡಿದ್ದಾರೆ.
ಪಾಂಡ್ಯ, ತಮ್ಮ ಮಗುವನ್ನು ಎರಡೂ ಕೈನಲ್ಲಿ ಹಿಡಿದು ಫೋಟೋಕ್ಕೆ ಫೋಸ್ ನೀಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಮಗುವಿನ ಫೋಟೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.
ಜುಲೈ 30 ರಂದು 26 ವರ್ಷದ ಹಾರ್ದಿಕ್ ಪಾಂಡ್ಯ ತಂದೆಯಾಗಿದ್ದಾರೆ. ನತಾಶಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದಕ್ಕೂ ಮೊದಲೂ ಮಗನ ಕೈ ಫೋಟೋವನ್ನು ಪಾಂಡ್ಯ ಹಂಚಿಕೊಂಡಿದ್ದರು.
https://www.instagram.com/p/CDVV1ZCF7E0/?utm_source=ig_embed