ಗುಜರಾತ್ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನರೇಂದ್ರ ಮೋದಿ ಸ್ಟೇಡಿಯಂನ್ನು ಉದ್ಘಾಟನೆ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿವಾದದ ಅಲೆಯೇ ಹುಟ್ಟಿಕೊಂಡಿದೆ. ಸರ್ದಾರ್ ವಲ್ಲಭಬಾಯ್ ಪಟೇಲ್ರ ಹೆಸರಲ್ಲಿದ್ದ ಈ ಸ್ಟೇಡಿಯಂಗೆ ಮರುನಾಮಕರಣದ ಅಗತ್ಯವಿತ್ತೇ ಎಂದು ವಿಪಕ್ಷಗಳು ಕೆಂಡ ಕಾರ್ತಿವೆ .
ಈ ವಿವಾದ ಇನ್ನೂ ಸುದ್ದಿಯಲ್ಲಿ ಇರುವಾಗಲೇ ಇದೀಗ ಅದಾನಿ ಹಾಗೂ ಅಂಬಾನಿ ಹೆಸರು ಕೂಡ ಈ ಮೈದಾನದ ವಿವಾದದ ಜೊತೆ ಥಳುಕು ಹಾಕಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಅಂದರೆ ಮೋದಿ ಸ್ಟೇಡಿಯಂನಲ್ಲಿರುವ ಎರಡು ಪೆವಿಲಿಯನ್ಗಳಿಗೆ ರಿಲಯನ್ಸ್ ಎಂಡ್ ಹಾಗೂ ಅದಾನಿ ಎಂಡ್ ಎಂದು ಹೆಸರಿಡಲಾಗಿದೆ.
ಯಡಿಯೂರಪ್ಪ ಡಕೋಟಾ ಬಸ್ ನಲ್ಲಿ ಕುಳಿತು ಅದರಲ್ಲೂ ಸ್ವಾಹಾ ಮಾಡುತ್ತಿದ್ದಾರೆ: ಸಿದ್ದರಾಮಯ್ಯ ವಾಗ್ದಾಳಿ
ಆದರೆ ಈ ರೀತಿ ಪೆವಿಲಿಯನ್ಗಳಿಗೆ ಅಂಬಾನಿ ಹಾಗೂ ಅದಾನಿಗೆ ಸಂಬಂಧಿಸಿದ ಹೆಸರನ್ನ ಇಡೋಕೆ ಮುಖ್ಯವಾದ ಕಾರಣವಿದೆ. ಈ ಎರಡೂ ಕಂಪನಿಗಳು ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ದೇಣಿಗೆ ನೀಡಿವೆ ಎನ್ನಲಾಗಿದೆ. ದೇಣಿಗೆಯ ಜೊತೆಗೆ ಈ ಎರಡೂ ಕಂಪನಿಗಳು ತಲಾ ಒಂದು ಕಾರ್ಪೋರೇಟ್ ಬಾಕ್ಸ್ಗಳನ್ನ ಖರೀದಿ ಮಾಡಿವೆ. ಇದರ ವೆಚ್ಚ 25 ವರ್ಷಗಳ ಅವಧಿಗೆ 250 ಕೋಟಿ ರೂಪಾಯಿ ಆಗಿದೆ. ಈ ರೀತಿ ದಾನಿಗಳ ಹೆಸರನ್ನ ಹಾಕೋದು ಒಪ್ಪಂದದಲ್ಲಿ ಇದ್ದ ಕಾರಣ ರಿಲಯನ್ಸ್ ಹಾಗೂ ಅದಾನಿ ಹೆಸರನ್ನ ಪೆವಿಲಿಯನ್ಗೆ ಇಡಲಾಗಿದೆ.
ಪೆವಿಲಿಯನ್ಗೆ ಅದಾನಿ ಎಂದು ನಾಮಕರಣ ಮಾಡಿದ್ದು ಇದೇ ಮೊದಲನೇನಲ್ಲ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಚಿಮನ್ಭಾಯ್ ಪಟೇಲ್ ಸರ್ಕಾರವಿದ್ದಾಗ ಅದಾನಿ ಹೆಸರನ್ನ ಪೆವಿಲಿಯನ್ಗೆ ಇಡಲಾಗಿತ್ತು. ಆದರೆ ಅಂಬಾನಿ ಹೊಸ ದಾನಿಯಾಗಿರೋದ್ರಿಂದ ಈಗ ಇನ್ನೊಂದು ಎಂಡ್ಗೆ ರಿಲಯನ್ಸ್ ಹೆಸರನ್ನ ಇಡಲಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಟ್ಟು 76 ಕಾರ್ಪೋರೇಟ್ ಬಾಕ್ಸ್ಗಳಿದ್ದು ಇದನ್ನ ಕೊಂಡುಕೊಳ್ಳಬಲ್ಲ ಉದ್ಯಮಿಗಾಗಿ ಹುಡುಕಾಟ ನಡೆಯುತ್ತಿದೆ.