ಟೀಂ ಇಂಡಿಯಾದ ಆರಂಭಿಕ ಆಟಗಾರನಾಗಿದ್ದ ಆಕಾಶ್ ಚೋಪ್ರಾ ಟೀಂ ಇಂಡಿಯಾದ ಮುಂದಿನ ನಾಯಕ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಕೊಹ್ಲಿ ನಂತ್ರ ಈ ಸ್ಥಾನಕ್ಕೇರಲು ಯುವ ಆಟಗಾರನೊಬ್ಬ ಸಿದ್ಧನಾಗ್ತಿದ್ದಾನೆಂದು ಆಕಾಶ್ ಹೇಳಿದ್ದಾರೆ.
ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕತ್ವ ವಹಿಸಲಿರುವ ಭಾರತೀಯ ತಂಡದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರನ್ನು ವಿರಾಟ್ ಉತ್ತರಾಧಿಕಾರಿ ಎಂದು ಆಕಾಶ್ ಹೇಳಿದ್ದಾರೆ.
ಈ ವರ್ಷ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ರಾಹುಲ್ ವಹಿಸಿಕೊಂಡಿದ್ದಾರೆ. ಈ ಮೊದಲು ಆರ್. ಅಶ್ವಿನ್ ಪಂಜಾಬ್ ತಂಡದ ನಾಯಕರಾಗಿದ್ದರು. ಅಶ್ವಿನ್ ಈಗ ದೆಹಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ. ರಾಹುಲ್ ನಾಯಕತ್ವದ ಬಗ್ಗೆ ಮಾತನಾಡಿದ ಆಕಾಶ್, ಪಂದ್ಯದಲ್ಲಿ ಅವರ ತಂತ್ರಗಾರಿಕೆಯನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.
ಕೊಹ್ಲಿ ಮತ್ತು ರೋಹಿತ್ ಒಂದೇ ವಯಸ್ಸಿನವರು. ಅವ್ರ ನಂತ್ರ ತಂಡಕ್ಕೆ ಸೂಕ್ತ ನಾಯಕನ ತಯಾರಿ ಮಾಡಬೇಕಾಗುತ್ತದೆ. ರಾಹುಲ್ ನಾಯಕತ್ವ ಉತ್ತಮವಾಗಿರುತ್ತದೆ ಎಂದು ಆಕಾಶ್ ಹೇಳಿದ್ದಾರೆ.