HomeLatest Newsಸ್ಪೇನ್’ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆ ನಿಷೇಧ.!

ಸ್ಪೇನ್’ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆ ನಿಷೇಧ.!

ಯುವ ಪೀಳಿಗೆಯನ್ನು ಆನ್‌ಲೈನ್ ಕಂಟೆಂಟ್‌ನ ದುಷ್ಪರಿಣಾಮಗಳಿಂದ ರಕ್ಷಿಸುವ ಉದ್ದೇಶದಿಂದ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಪ್ರವೇಶವನ್ನು ನಿಷೇಧಿಸಲು ಸ್ಪೇನ್ ಯೋಜಿಸುತ್ತಿದೆ ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್  ತಿಳಿಸಿದರು.

ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಮಾತನಾಡಿದ ಸ್ಯಾಂಚೆಜ್, ಪೀಳಿಗೆಯನ್ನು ಆನ್‌ಲೈನ್ ಕಂಟೆಂಟ್‌ನ ದುಷ್ಪರಿಣಾಮಗಳಿಂದ ರಕ್ಷಿಸುವ ಉದ್ದೇಶದಿಂದ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಪ್ರವೇಶವನ್ನು ನಿಷೇಧಿಸಲು ಸ್ಪೇನ್ ಯೋಜಿಸುತ್ತಿದೆ . ಮಕ್ಕಳ ಲೈಂಗಿಕ ಶೋಷಣೆ ಮತ್ತು ಸಮ್ಮತಿಯಿಲ್ಲದ ‘ಡೀಪ್‌ಫೇಕ್’ ಚಿತ್ರಗಳು ಹಾಗೂ ವಿಡಿಯೋಗಳಂತಹ ಕಾನೂನುಬಾಹಿರ ಕಂಟೆಂಟ್‌ಗಳಿಗೆ ಅವಕಾಶ ನೀಡುತ್ತಿರುವ ದೊಡ್ಡ ಟೆಕ್ ಕಂಪನಿಗಳನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರಗಳು ಇನ್ನು ಮುಂದೆ ಇದರ ಬಗ್ಗೆ “ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ” ಎಂದರು”ನಮ್ಮ ಮಕ್ಕಳು ಒಬ್ಬಂಟಿಯಾಗಿ ಹೋಗಬಾರದಂತಹ ವಾತಾವರಣಕ್ಕೆ ಇಂದು ತೆರೆದುಕೊಂಡಿದ್ದಾರೆ. ಇದನ್ನು ನಾವು ಇನ್ನು ಮುಂದೆ ಸಹಿಸುವುದಿಲ್ಲ” ಎಂದು ಅವರು ಖಡಕ್ ಆಗಿ ಹೇಳಿದರು.

ಜಾಗತಿಕ ಒಕ್ಕೂಟ: ಸ್ಪೇನ್ ಇತರ ಐದು ಯುರೋಪಿಯನ್ ರಾಷ್ಟ್ರಗಳೊಂದಿಗೆ ಸೇರಿ “ಡಿಜಿಟಲ್ ಆಸಕ್ತರ ಒಕ್ಕೂಟ”ವನ್ನು ರಚಿಸಿದೆ. ಇದು ಬಹುರಾಷ್ಟ್ರೀಯ ಮಟ್ಟದಲ್ಲಿ ಸೋಶಿಯಲ್ ಮೀಡಿಯಾ ವೇದಿಕೆಗಳನ್ನು ನಿಯಂತ್ರಿಸುವ ಕೆಲಸ ಮಾಡಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತರ ದೇಶಗಳಪರಿಸ್ಥಿತಿ:ಸ್ಪೇನ್ ಈಗ ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನಂತಹ ದೇಶಗಳ ಸಾಲಿಗೆ ಸೇರಿದೆ:

  • ಆಸ್ಟ್ರೇಲಿಯಾ: 16 ವರ್ಷದೊಳಗಿನ ಮಕ್ಕಳು ಟಿಕ್‌ಟಾಕ್, ಫೇಸ್‌ಬುಕ್, ಸ್ನಾಪ್‌ಚಾಟ್, ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆ ತೆರೆಯುವುದನ್ನು ತಡೆಯಲು ವಿಫಲವಾದರೆ ಕಂಪನಿಗಳನ್ನೇ ಜವಾಬ್ದಾರರನ್ನಾಗಿ ಮಾಡುವ ವಿಶ್ವದ ಮೊದಲ ಕಾನೂನನ್ನು ಜಾರಿಗೆ ತಂದಿದೆ.
  • ಫ್ರಾನ್ಸ್: 15 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧಿಸುವ ಮಸೂದೆಯನ್ನು ಅನುಮೋದಿಸಿದೆ. ಇದು ಸೆಪ್ಟೆಂಬರ್‌ನಿಂದ ಜಾರಿಗೆ ಬರಲಿದ್ದು, ಹೈಸ್ಕೂಲ್‌ಗಳಲ್ಲಿ ಮೊಬೈಲ್ ಬಳಕೆಯನ್ನೂ ನಿಷೇಧಿಸಲಾಗಿದೆ.
  • ಡೆನ್ಮಾರ್ಕ್: ಇಲ್ಲೂ ಕೂಡ 15 ವರ್ಷದೊಳಗಿನವರಿಗೆ ಇದೇ ರೀತಿಯ ಕಾನೂನು ತರಲು ಸಿದ್ಧತೆ ನಡೆದಿದೆ.

ಕಟ್ಟುನಿಟ್ಟಿನ ಜಾರಿ:

ಸ್ಯಾಂಚೆಜ್ ಅವರ ಪ್ರಕಾರ, ಕೇವಲ ಹೆಸರಿಗಷ್ಟೇ ವಯಸ್ಸಿನ ಮಿತಿ ಹೇರುವುದಿಲ್ಲ. ಸೋಶಿಯಲ್ ಮೀಡಿಯಾ ಕಂಪನಿಗಳು “ವಯಸ್ಸು ದೃಢೀಕರಣ ವ್ಯವಸ್ಥೆ” (Age Verification System) ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ಪ್ರಸ್ತುತ ಹಲವು ಆಪ್‌ಗಳಲ್ಲಿ ಕೇವಲ “ಸ್ವಯಂ ಘೋಷಿತ ವಯಸ್ಸು” ಸಾಕಾಗುತ್ತದೆ, ಆದರೆ ಇನ್ನು ಮುಂದೆ ಇದು ಕೆಲಸ ಮಾಡುವುದಿಲ್ಲ.

ಭಾರತದಲ್ಲೂ ಚರ್ಚೆ:

ವರದಿಯ ಪ್ರಕಾರ, ಭಾರತದಲ್ಲೂ ಮಕ್ಕಳಿಗಾಗಿ ಸೋಶಿಯಲ್ ಮೀಡಿಯಾ ನಿಷೇಧಿಸುವ ಮಸೂದೆಯನ್ನು ಪ್ರಧಾನಿ ಮೋದಿ ಅವರ ಸಹೋದ್ಯೋಗಿಯೊಬ್ಬರು ಪ್ರಸ್ತಾಪಿಸಿದ್ದಾರೆ. ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮಾನಸಿಕ ಅಸ್ವಸ್ಥತೆ ಮತ್ತು ಆತ್ಮಹತ್ಯೆಯ ಆಲೋಚನೆಗಳಿಗೆ ಸೋಶಿಯಲ್ ಮೀಡಿಯಾ ಪ್ರಚೋದನೆ ನೀಡುತ್ತಿದೆ ಎಂಬುದು ತಜ್ಞರ ಆತಂಕವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular