ಜೈಪುರ: ಕುರಿ ಮೇಯಿಸಲು ಹೋಗಿದ್ದ ಮಹಿಳೆಯ ಕಾಲು ಕತ್ತರಿಸಿ, ಕೊಲೆಗೈದು ಬಳಿಕ ಆಕೆ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿ ಕಳ್ಳರು ಪರಾರುಯಾಗಿರುವ ಘಟನೆ ರಾಜಸ್ಥಾನದ ಕೊಡೈ ಗ್ರಾಮದಲ್ಲಿ ನಡೆದಿದೆ.
ಕಾಡಿನಲ್ಲಿ ಕುರಿಗಳನ್ನು ಮೇಯಿಸಲು ಹೋಗಿದ್ದ ಮಹಿಳೆಯನ್ನು ಕಳ್ಳ ಖದೀಮರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮಹಿಳೆಯ ಗಂಟಲು ಸೀಳಿ, ಕಾಲುಗಳನ್ನು ಕತ್ತರಿಸಿ ಆಭರಣಗಳನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಮಹಿಳೆ ಎಷ್ಟು ಹೊತ್ತಾದರೂ ವಾಪಸ್ ಬಾರದಿದ್ದಾಗೆ ಆಕೆಯ ಮಗ ಹುಡುಕಿಕೊಂಡು ತೆರಳಿದ್ದಾನೆ. ಈ ವೇಳೆ ತಾಯಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದಾನೆ. ದೇವಿ ಕೊಲೆಯಾದ ಮಹಿಳೆ.
ಮಹಿಳೆಯಯನ್ನು ಬರ್ಬರವಾಗಿ ಕೊಲೆಗೈದು ಆಕೆಯ ಬಳಿ ಇದ್ದ 6.5 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ. ಮಹಿಳೆಯ ಶವ ಗಂಟಲು ಸೀಳಿ, ಕಾಲುಗಳನ್ನು ಕತ್ತರಿಸಿದ ರೀತಿಯಲ್ಲಿ ಪತ್ತೆಯಾಗಿದೆ.
ದೇವಿ ಮೈಮೇಲಿದ್ದ ಚಿನ್ನದ ಪೆಂಡೆಂಟ್, ಕಿವಿಯೋಲೆಗಳು ಮತ್ತು ಮೂಗುತಿ ಸಹ ಕಳ್ಳತನವಾಗಿದೆ. ದಾಳಿಕೋರರು ದೇವಿಯನ್ನು ಕೊಂದು, ಆಕೆಯ ಮೇಲಿದ್ದ ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದು, ಕಳ್ಳರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

