HomeEntertainmentಹುಟ್ಟು ಹಬ್ಬದ ಸಂಭ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್

ಹುಟ್ಟು ಹಬ್ಬದ ಸಂಭ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್

ಕನ್ನಡ ಸೇರಿದಂತೆ ತೆಲುಗು, ತಮಿಳು, ಮತ್ತು ಮಲಯಾಳಂ ಚಿತ್ರರಂಗದಲ್ಲಿ ಆದ ಚಾಪು ಮೂಡಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್ ಇಂದು ತಮ್ಮ 36ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 1998ರಲ್ಲಿ ತೆರೆ ಕಂಡ ‘ಹನುಮಾನ್’ ಚಿತ್ರದಲ್ಲಿ ಬಾಲನಟಿಯಾಗಿ ತೆರೆಹಂಚಿಕೊಳ್ಳುವ ಮೂಲಕ ತಮ್ಮ ಸಿನಿ ಜರ್ನಿ ಯನ್ನು ಆರಂಭಿಸಿದರು. ಬಳಿಕ 2006ರಲ್ಲಿ ‘ಸೆವೆನ್ ಓ ಕ್ಲಾಕ್’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು.

2008ರಲ್ಲಿ ‘ಆಕಾಶ ಗೋಪುರಂ’ ಎಂಬ ಮಲಯಾಳಂ ಚಿತ್ರದಲ್ಲಿ ಮೊದಲ ಬಾರಿ ನಾಯಕ ನಟಿಯಾಗಿ ಅಭಿನಯಿಸಿದರು. ನಂತರ ನಿತ್ಯಾ ಮೆನನ್ ಅವರಿಗೆ ಸಾಲು ಸಾಲು ಆಫರ್‌ಗಳು ಕೈಬೀಸಿ ಕರೆದವು. ಕಳೆದ ವರ್ಷ ಮಲೆಯಾಳನ್ನ ‘ಕೋಲಂಬಿ’ನಲ್ಲಿ ತೆರೆಕಂಡಿದ್ದ ಇವರು ಇತ್ತೀಚಿಗೆ ‘ರಾಯನ್’ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಸಿನಿ ತಾರೆಯರು ನಿತ್ಯ ಮೆನನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular