HomeLatest Newsಕ್ಷಮಿಸಿ ಮಮ್ಮಿ-ಪಪ್ಪಾ… : ಪೋಷಕರಿಗೆ ಆಘಾತ ತಂದ ಮೂವರು ಹೆಣ್ಣು ಮಕ್ಕಳ ಡೆತ್ ನೋಟ್.!

ಕ್ಷಮಿಸಿ ಮಮ್ಮಿ-ಪಪ್ಪಾ… : ಪೋಷಕರಿಗೆ ಆಘಾತ ತಂದ ಮೂವರು ಹೆಣ್ಣು ಮಕ್ಕಳ ಡೆತ್ ನೋಟ್.!

ಘಾಜಿಯಾಬಾದ್ : ಉತ್ತರ ಪ್ರದೇಶದ ಘಾಜಿಯಾಬಾದ್‘ನ ‘ಭಾರತ್ ಸಿಟಿ’ ಎಂಬ ವಸತಿ ಸಮುಚ್ಚಯದಲ್ಲಿ ಬುಧವಾರ ಮುಂಜಾನೆ ಯಾರೂ ಊಹಿಸದ ಭೀಕರ ಘಟನೆಯೊಂದು ಸಂಭವಿಸಿದೆ. ಒಂದೇ ಮನೆಯ ಮೂವರು ಅಪ್ರಾಪ್ತ ಸಹೋದರಿಯರು ಒಟ್ಟಾಗಿ ಸಾವಿಗೆ ಶರಣಾಗುವ ಮೂಲಕ ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದಾರೆ.

ಘಾಜಿಯಾಬಾದ್‘ನ ಅಪಾರ್ಟ್ಮೆಂಟ್ ಒಂದರ 9ನೇ ಮಹಡಿಯಿಂದ ಜಿಗಿದು ಮೂವರು ಅಪ್ರಾಪ್ತ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಈ ಘಟನೆ ಕುರಿತಾದ ಹಲವು ಆಘಾತಕಾರಿ ವಿಚಾರಗಳು ಒಂದೊಂದಾಗಿಯೇ ಹೊರ ಬರುತ್ತಿದೆ.

ಬೆಳಗಿನ ಜಾವ ಸುಮಾರು 2.15ಕ್ಕೆ ಭಾರತ್ ಸಿಟಿಯ ಟವರ್ ಒಂದರ 9ನೇ ಮಹಡಿಯಿಂದ ಮೂವರು ಬಾಲಕಿಯರು ಜಿಗಿದಿದ್ದಾರೆ. ನಿಶಿಕಾ (16), ಪ್ರಾಚಿ (14) ಮತ್ತು ಪಾಖಿ (12) ಎಂಬುವವರು ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ . ಈ ಮೂವರು ಚೇತನ್ ಕುಮಾರ್ ಎಂಬುವವರ ಪುತ್ರಿಯರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದೇ ತಟ್ಟೆಯ ಊಟ, ಒಂದೇ ರೀತಿಯ ಆಟ: “ಈ ಮೂವರು ಸಹೋದರಿಯರು ಸ್ನಾನ, ಊಟ, ನಿದ್ದೆ ಮತ್ತು ಶಾಲೆಯವರೆಗೆ ಎಲ್ಲವನ್ನೂ ಜೊತೆಯಾಗಿಯೇ ಮಾಡುತ್ತಿದ್ದರು” ಎಂದು ಎಸಿಪಿ ತಿಳಿಸಿದ್ದಾರೆ. ಇವರು ಒಂದು ನಿರ್ದಿಷ್ಟ ಆಟಕ್ಕೆ (Game) ಎಷ್ಟರಮಟ್ಟಿಗೆ ಮರುಳಾಗಿದ್ದರೆಂದರೆ, ತಾವು ಭಾರತೀಯರಲ್ಲ, ಬದಲಾಗಿ ‘ಕೊರಿಯನ್ನರು’ ಎಂದು ನಂಬಿದ್ದರು. ಆಟದ ಪ್ರಭಾವದಿಂದಾಗಿ ತಮ್ಮನ್ನು ತಾವು ‘ಕೊರಿಯನ್ ರಾಜಕುಮಾರಿಯರು’ ಎಂದು ಬಿಂಬಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸ್ಥಳದಲ್ಲಿ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಹೀಗೆ ಬರೆಯಲಾಗಿದೆ:

ಏನಿದೆ ಡೆತ್ ನೋಟ್ ನಲ್ಲಿ..?

‘ಮಮ್ಮಿ, ಪಪ್ಪಾ ಕ್ಷಮಿಸಿ. ನೀವು ಯಾವ ಆಟವನ್ನು ಬಿಡಬೇಕು ಎಂದು ಬಯಸಿದ್ದಿರೋ, ಅದನ್ನು ನಾವು ಎಷ್ಟು ಪ್ರೀತಿಸುತ್ತಿದ್ದೆವು ಎಂದು ಈಗ ನಿಮಗೆ ಅರ್ಥವಾಗಬಹುದು.””ಈ ಡೈರಿಯಲ್ಲಿ ಏನೇನು ಬರೆಯಲಾಗಿದೆಯೋ ಅದೆಲ್ಲವನ್ನೂ ಓದಿ, ಯಾಕೆಂದರೆ ಇದೆಲ್ಲವೂ ಸತ್ಯ.” ಎಂದು ಬರೆದಿದ್ದರು.

ಪೊಲೀಸರು ಸದ್ಯ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಈ ಘಟನೆಯು ಪೋಷಕರು ತಮ್ಮ ಮಕ್ಕಳ ಡಿಜಿಟಲ್ ಚಟುವಟಿಕೆಗಳ ಮೇಲೆ ನಿಗಾ ಇಡುವುದರ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular