HomeBeautyಹೊಸ ಉತ್ಪನ್ನ ಬಳಸುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಿ ಈ ಕೆಲವು ವಿಚಾರ

ಹೊಸ ಉತ್ಪನ್ನ ಬಳಸುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಿ ಈ ಕೆಲವು ವಿಚಾರ

ಮಾರುಕಟ್ಟೆಯಲ್ಲಿ ನಿತ್ಯ ಹೊಸ ಹೊಸ ಸೌಂದರ್ಯದ ಉತ್ಪನ್ನಗಳು ಬಿಡುಗಡೆಯಾಗುತ್ತಿರುತ್ತವೆ. ಅವುಗಳನ್ನೆಲ್ಲ ನೀವು ಕೊಳ್ಳುವ ಮೊದಲು ಪರೀಕ್ಷಿಸುವ ಮೊದಲು, ಈ ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ಆಯ್ಕೆ ಮಾಡುವಾಗ ಬೆಲೆ ಆಧರಿಸಿ ನೀವು ಕೊಳ್ಳದಿರಿ. ನಿಮ್ಮ ತ್ವಚೆಯ ವಿಧದ ಮೇಲೆ ಉತ್ಪನ್ನಗಳನ್ನು ಆಯ್ಕೆ ಮಾಡಿ. ಯಾವುದೇ ಉತ್ಪನ್ನವನ್ನು ನೇರವಾಗಿ ತುಟಿ ಅಥವಾ ಕಣ್ಣಿಗೆ ಹಚ್ಚಿಕೊಳ್ಳದಿರಿ. ಅದಕ್ಕೂ ಮುನ್ನ ನಿಮ್ಮ ಮುಂಗೈಗೆ ಹಚ್ಚಿ ಪರೀಕ್ಷಿಸಿಕೊಳ್ಳಿ.

 ಕೊಳ್ಳುವ ಮುನ್ನ ಸ್ಯಾಂಪಲ್ ನೋಡಲು ಮರೆಯದಿರಿ. ಇಂದು ಬಹುತೇಕ ಸೌಂದರ್ಯ ಪ್ರಸಾಧನ ಉತ್ಪನ್ನಗಳ ಮಳಿಗೆಗಳಲ್ಲಿ ಸ್ಯಾಂಪಲ್ ನೀಡಿ ಪರೀಕ್ಷಿಸುವ ವ್ಯವಸ್ಥೆ ಇರುತ್ತದೆ. ಇವರು ನಿಮ್ಮ ತ್ವಚೆಗೆ ಇದು ಹೊಂದಿಕೊಳ್ಳುತ್ತದೆಯೋ ಇಲ್ಲವೋ ಎಂದು ಪರೀಕ್ಷಿಸಿ ಹೇಳುತ್ತಾರೆ.

ಇನ್ನು ಕೆಲವರಿಗೆ ನಿರ್ದಿಷ್ಟ ಉತ್ಪನ್ನವನ್ನು ಹೇಗೆ ಬಳಸಬಹುದು ಎಂದು ತಿಳಿದಿರುವುದಿಲ್ಲ. ಆ ಸಂದರ್ಭದಲ್ಲೂ ನೀವು ಕೊಳ್ಳುವಾಗಲೇ ಸಹಾಯಕರ ನೆರವು ಪಡೆದುಕೊಳ್ಳಬೇಕು. ಇವರು ಅದನ್ನು ಬಳಸುವ ವಿವರವನ್ನು ನಿಮಗೆ ತಿಳಿಸಿಕೊಡುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular