HomeIndiaಅಂಕಲ್ ಅಪ್ಪನನ್ನು ಬಿಟ್ಬಿಡಿ....... ಆರು ಮಕ್ಕಳ ಜೊತೆ ಸವಾರಿ ಹೊರಟ ತಂದೆ......!

ಅಂಕಲ್ ಅಪ್ಪನನ್ನು ಬಿಟ್ಬಿಡಿ……. ಆರು ಮಕ್ಕಳ ಜೊತೆ ಸವಾರಿ ಹೊರಟ ತಂದೆ……!

एक बाइक पर 6 बच्चे बैठाकर ले जा रहा था शख्स

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಆರು ಮಕ್ಕಳ ಜೊತೆ ವ್ಯಕ್ತಿಯೊಬ್ಬ ಬೈಕ್ ನಲ್ಲಿ ಸವಾರಿ ಮಾಡ್ತಿರೋದನ್ನು ನೀವು ನೋಡ್ಬಹುದು. ಈ ಫೋಟೋ ನೋಡ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಕೋಪಗೊಂಡಿದ್ದಾರೆ. ಇಷ್ಟೊಂದು ಮಕ್ಕಳ ಜೊತೆ ಬೈಕ್ ನಲ್ಲಿ ಪ್ರಯಾಣ ಬೆಳೆಸೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಲ್ಲದೆ ಸೂಕ್ತ ಕ್ರಮಕ್ಕೆ ಟ್ರಾಫಿಕ್ ಪೊಲೀಸರಿಗೆ ಆಗ್ರಹ ಮಾಡಿದ್ದಾರೆ.

ವಾಸ್ತವವಾಗಿ ಬೈಕ್ ನಲ್ಲಿ ಹೋಗ್ತಿದ್ದ ಹುಡುಗರು ಮತ್ತ್ಯಾರೂ ಅಲ್ಲ. ಬೈಕ್ ಚಾಲನೆ ಮಾಡ್ತಿದ್ದ ವ್ಯಕ್ತಿಯ ಮಕ್ಕಳು. ತನ್ನ ಆರು ಮಕ್ಕಳ ಜೊತೆ ಬೈಕ್ ಸವಾರಿ ಮಾಡ್ತಿರುವ ಈ ವ್ಯಕ್ತಿ ಯುಪಿಯ ವಾರಣಾಸಿ ನಿವಾಸಿ. ಜನನಿಬಿಡಿ ಪ್ರದೇಶದಲ್ಲಿ ಇಷ್ಟೊಂದು ಮಕ್ಕಳ ಜೊತೆ ಬೈಕ್ ಸವಾರಿ ಮಾಡ್ತಿದ್ದ ವ್ಯಕ್ತಿ ನೋಡಿ ಪೊಲೀಸರು ದಂಗಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದುರ್ಗಾ ಪೂಜೆ ಸಂದರ್ಭದಲ್ಲಿ ಜನರ ಓಡಾಟ ಹೆಚ್ಚಿತ್ತು. ಸಾವಿರಾರು ವಾಹನಗಳು ಓಡಾಡ್ತಿದ್ದವು. ಈ ಸಂದರ್ಭದಲ್ಲಿ ಆರು ಮಕ್ಕಳ ಜೊತೆ ಬೈಕ್ ನಲ್ಲಿ ಪ್ರಯಾಣ ಬೆಳೆಸೋದು ಆಪತ್ತಿಗೆ ಆಹ್ವಾನ ಮಾಡಿದಂತೆ ಆಗಿತ್ತು. ಹಾಗಾಗಿ ಬೈಕ್ ನಿಲ್ಲಿಸಿ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ನಂತ್ರ ದಂಡ ವಿಧಿಸಲು ಮುಂದಾಗಿದ್ದಾರೆ.

ಪೊಲೀಸರು ದಂಡ ಕೇಳ್ತಿದ್ದಂತೆ ಹಿಂದೆ ಕುಳಿತಿದ್ದ ಮಕ್ಕಳು ಪೊಲೀಸರಿಗೆ ರಿಕ್ವೆಸ್ಟ್ ಮಾಡಿದ್ದಾರೆ. ನಾವೆಲ್ಲ ಅವರ ಮಕ್ಕಳು, ನಮ್ಮನ್ನು ಬಿಡಿ ಎಂದಿದ್ದಾರೆ. ಪೊಲೀಸರು ಬೇರೆ ದಾರಿಯಿಲ್ಲದೆ, ವ್ಯಕ್ತಿಗೆ ವಾರ್ನ್ ಮಾಡಿ ಕಳುಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular