HomeKarnatakaSIRಗೆ ತೆರಳಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಮಹಿಳಾ BLO: ಆಸ್ಪತ್ರೆಗೆ ದಾಖಲು

SIRಗೆ ತೆರಳಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಮಹಿಳಾ BLO: ಆಸ್ಪತ್ರೆಗೆ ದಾಖಲು

ಹಾಸನ: ರಾಜ್ಯಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್​​ಐಆರ್​) ಪ್ರಕ್ರಿಯೆ ನಡೆಯುತ್ತಿದ್ದು, ಬಿಎಲ್​​ಓಗಳು ಮನೆ ಮನೆಗೆ ತೆರಳಿ ಅರ್ಜಿ ನಮೂನೆ ನೀಡುತ್ತಿದ್ದಾರೆ. ಆದರೆ, ಕೆಲವಡೆ ಎಸ್ ಐಆರ್ ಪ್ರಕ್ರಿಯೆಗೆ ತೆರಳಿದ್ದ ವೇಳೆ ದುರಂತಗಳು ಸಂಭವಿಸಿವೆ. ತುಮಕೂರಿನಲ್ಲಿ ಎಸ್ ಐಆಆರ್ ಕರ್ತವ್ಯಕ್ಕೆ ತೆರಳುವಾಗ ರಸ್ತೆ ಅಪಘಾತದಲ್ಲಿ ವಿಎಒ ಭುವನಾ ಮೃತಪಟ್ಟಿದ್ದರೆ, ಇನ್ನೊಂದೆಡೆ ಬೀದರ್‌ನಲ್ಲಿ ಕಂದಾಯ ನೌಕರ. ಎಸ್‌ಐಆರ್ ಕರ್ತವ್ಯದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಹಾಸನದಲ್ಲಿ ಎಸ್‌ಐಆರ್ ಕರ್ತವ್ಯದ ವೇಳೆ ಶಿಕ್ಷಕಿಯೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆ ಬೇಲೂರು ಪಟ್ಟಣದ ಚನ್ನೇಗೌಡರ ಬೀದಿಯಲ್ಲಿ ಶಿಕ್ಷಕಿ ಪಾರ್ವತಿ ಎನ್ನುವರು ಗಣತಿಗೆ ತೆರಳಿದ್ದ ವೇಳೆ ಅಸ್ವಸ್ಥಗೊಂಡು ಕುಸಿದುಬಿದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿಕ್ಷಕಿ ಪಾರ್ವತಿ ಹೇಳುವ ಪ್ರಕಾರ, ತನಗೆ ಅನಾರೋಗ್ಯ ಸಮಸ್ಯೆಯಿದೆ ಎಂದು ಹೇಳಿ ಅದಕ್ಕೆ ಸಂಬಂಧಿಸಿದ ಮೆಡಿಕಲ್ ಸರ್ಟಿಫಿಕೆಟ್ ಗಳನ್ನು ನೀಡಿದ್ದರು ಕೂಡ ಅವರನ್ನು ಎಸ್ ಐಆರ್ ಗೆ ನೇಮಕ ಮಾಡಲಾಗಿತ್ತಂತೆ. ಹುಷಾರಿಲ್ಲ. ಭಾನುವಾರ ರಜಾದಿನವಿರುವುದರಿಂದ ಒಂದು ದಿನ ರಜೆ ಕೇಳಿದ್ದರೂ ಕೊಟ್ಟಿಲ್ಲ. ಅಧಿಕಾರಿಗಳಿಗೆ ಎಷ್ಟೇ ಮನವಿ‌ ಮಾಡಿದರೂ ನನ್ನ ಮಾತು ಕೇಳಿಲ್ಲ. ಈಗ ಎಸ್ ಐಆರ್ ಗೆ ತೆರಳಿದ್ದಗ ತಲೆ ತಿರುಗಿ ಬಿದ್ದಿದ್ದು, ಈಗ ವೈದ್ಯರು ಒಂದು ವಾರ ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ. ನಾಳೆಯಿಂದ ಎಸ್ ಐಆರ್ ಗೆ ಹೋಗುವುದಾದರೂಭೇಗೆ ಎಂಬುದು ತಿಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular