ಬೆಂಗಳೂರು: ನೀವು ಚಿನ್ನ ಖರೀದಿಸಲು ಕಾಯುತ್ತಿದ್ದೀರಾ? ಹಾಗಿದ್ದರೆ ಇಂದೇ ಸರಿಯಾದ ಸಮಯ. ಸತತ ಏರಿಕೆಯ ನಂತರ, ಬುಧವಾರದ ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ಕರೆಕ್ಷನ್ ಆಗಿದ್ದು, ಇಂದೂ ಕೂಡ ದರ ಇಳಿಕೆಯ ಹಾದಿಯಲ್ಲಿದೆ.
ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನದ ದರ ಸ್ಥಿರವಾಗಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ರೂಪಾಯಿ ಮೌಲ್ಯದ ಆಧಾರದ ಮೇಲೆ ದರಗಳು ಬದಲಾಗುತ್ತಿವೆ. ಮದುವೆ ಸೀಸನ್ ಆರಂಭವಾಗುವ ಮುನ್ನ ಈ ಇಳಿಕೆ ಗ್ರಾಹಕರಿಗೆ ವರದಾನವಾಗಲಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ (Gold Rates today):
ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಂಗಾರದ ಬೆಲೆ ಹೀಗಿದೆ:
22 ಕ್ಯಾರೆಟ್ (ಆಭರಣ ಚಿನ್ನ): ₹1,41,350 (ಪ್ರತಿ 10 ಗ್ರಾಂಗೆ)
24 ಕ್ಯಾರೆಟ್ (ಅಪರಂಜಿ ಚಿನ್ನ): ₹1,54,420 (ಪ್ರತಿ 10 ಗ್ರಾಂಗೆ)
ಬೆಲೆ ಇಳಿಕೆ: ಪ್ರತಿ ಗ್ರಾಂ ಚಿನ್ನದ ಮೇಲೆ ₹65 ರಷ್ಟು ಕಡಿತ.
ಬೆಳ್ಳಿ ಬೆಲೆಯಲ್ಲಿ ಭರ್ಜರಿ ಕುಸಿತ:
ಚಿನ್ನಕ್ಕಿಂತಲೂ ಹೆಚ್ಚಾಗಿ ಬೆಳ್ಳಿಯ ಬೆಲೆ ನಿರಂತರವಾಗಿ ಕುಸಿಯುತ್ತಿದೆ.
ಬೆಂಗಳೂರು: ಪ್ರತಿ 100 ಗ್ರಾಂ ಬೆಳ್ಳಿಗೆ ₹25,500 ಇದೆ.
ದೆಹಲಿ: ಪ್ರತಿ ಕೆಜಿ ಬೆಳ್ಳಿಗೆ ಬರೋಬ್ಬರಿ ₹5,000 ಇಳಿಕೆಯಾಗಿದ್ದು, ₹2,55,000 ದಾಖಲಾಗಿದೆ.
ಭಾರತದಲ್ಲಿನ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರವರಿ 18)
| ಲೋಹ | ಪ್ರತಿ ಗ್ರಾಂ ಬೆಲೆ |
|---|---|
| 24 ಕ್ಯಾರಟ್ ಚಿನ್ನ | ₹15,420 |
| 22 ಕ್ಯಾರಟ್ ಚಿನ್ನ | ₹14,135 |
| 18 ಕ್ಯಾರಟ್ ಚಿನ್ನ | ₹11,565 |
| ಬೆಳ್ಳಿ | ₹255</t |
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
| ನಗರಗಳ ಹೆಸರು | ಚಿನ್ನದ ಬೆಲೆ (10 ಗ್ರಾಂ) |
|---|---|
| ಬೆಂಗಳೂರು | ₹1,54,200 |
| ನಾಗ್ಪುರ | ₹1,54,200 |
| ಮುಂಬೈ | ₹1,54,200 |
| ಚೆನ್ನೈ | ₹1,55,240 |
| ಕೋಲ್ಕತ್ತಾ | ₹1,54,200 |
| ಪಾಟ್ನಾ | ₹1,54,250 |
| ಸೂರತ್ | ₹1,54,250 |
| ಚಂಡೀಗಢ | ₹1,54,350 |
| ಲಕ್ನೋ | ₹1,54,350 |

