HomeLatest NewsBREAKING: ಸರ್ಕಾರಿ ಕಾಲೇಜು ಉಪನ್ಯಾಸಕಿ ಹಾಗೂ ಗ್ಯಾಂಗ್ ನಿಂದಲೇ ಹನಿಟ್ರ್ಯಾಪ್: ದಂಪತಿ ಅರೆಸ್ಟ್

BREAKING: ಸರ್ಕಾರಿ ಕಾಲೇಜು ಉಪನ್ಯಾಸಕಿ ಹಾಗೂ ಗ್ಯಾಂಗ್ ನಿಂದಲೇ ಹನಿಟ್ರ್ಯಾಪ್: ದಂಪತಿ ಅರೆಸ್ಟ್

ಹಾಸನ: ಕಾಲೇಜು ಉಪನ್ಯಾಸಕಿ ಹಾಗೂ ಆಕೆಯ ಪತಿ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಜಾಲವನ್ನು ಹಾಸನ ಪೊಲೀಸರು ಬೇಧಿಸಿದ್ದಾರೆ.

ಸರ್ಕಾರಿ ಕಾಲೇಜು ಉಪನ್ಯಾಸಕಿಯಾಗಿರುವ ನಾಗಲಕ್ಷ್ಮೀ ಹಾಗೂ ಆಕೆಯ ಪತಿ ಸಿಧಿಕ್ ಹಾಗೂ ಗ್ಯಾಂಗ್ ನಿಂದ ಬಡ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದರು. ಮನೆಗೆ ಬಂದಿದ್ದ ವ್ಯಕ್ತಿಯೋರ್ವನನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇದಿಕೆ ಇಟ್ಟಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫೆ.13ರಂದು ಮನೆಗೆ ಬಂದಿದ್ದ ಸಂತ್ರಸ್ತೆಯ ಸ್ನೇಹಿತನನ್ನು ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಲವಂತವಾಗಿ ದೂರು ನೀಡುವಂತೆ ದಂಪತಿ ಸಂತ್ರಸ್ತೆಗೆ ಒತ್ತಾಯಿಸಿದ್ದರು. ಆದರೆ ಸಂತ್ರಸ್ತೆ ದೂರು ನೀಡಲು ನಿರಾಕರಿಸಿದ್ದಳು. ಬಳಿಕ ಹಾಸನದ ಹೊಳೆನರಸಿಪುರ ಠಾಣೆಗೆ ಸಂತ್ರಸ್ತೆ ಬಲವಂತವಾಗಿ ಹೋಗಿ ದೂರು ನೀಡಿದ್ದಳು.

ಬಳಿಕ ಸಂತ್ರಸ್ತೆಯನ್ನು ಸಾಂತ್ವನ ಕೇಂದ್ರದಲ್ಲಿ ಇಡಲಾಗಿತ್ತು. ಈ ವೇಳೆ ತನ್ನ ಸ್ನೇಹಿತ ಮನೆಗೆ ಬಂದಾಗ ಆತನ ಫೋಟೋ, ನನ್ನ ಫೋಟೋಗಳನ್ನು ಇಟ್ಟುಕೊಂಡು ದಂಪತಿ ಹನಿಟ್ರ್ಯಾಪ್ ಆರೋಪ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಕಣ್ಣೀರಿಟ್ಟಿದ್ದಾಳೆ. ಇದೇ ರೀತಿ ಹಲವರಿಗೆ ನಾಗಲಕ್ಷ್ಮೀ ಹಾಗೂ ಆಕೆಯ ಪತಿ ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದಾಗಿ ಸಂತ್ರಸ್ತೆ ದೂರಿದ್ದಾಳೆ.

ಇದೀಗ ಉಪನ್ಯಾಸಕಿ ನಾಗಲಕ್ಷ್ಮೀ ಹಾಗೂ ಆಕೆಯ ಪತಿ ಸಿದ್ಧಿಕ್, ಫಣಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ನಾಗಲಕ್ಷ್ಮೀ ಹಾಗೂ ಪತಿಯನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular