ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಯುದ್ಧದ ಭೀತಿಯಿಂದಾಗಿ ಡಾಲರ್ ಮೌಲ್ಯ ಬಲಗೊಂಡಿರುವ ಪರಿಣಾಮ, ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದ್ದರೆ ಬೆಳ್ಳಿ ಬೆಲೆ ಮಾತ್ರ ಬರೋಬ್ಬರಿ 10 ಸಾವಿರ ರೂಪಾಯಿಯಷ್ಟು ಇಳಿಕೆಯಾಗಿ ಗ್ರಾಹಕರಿಗೆ ನಿರಾಳ ತಂದಿದೆ.
ಇಂದಿನ ಚಿನ್ನದ ದರ ಎಷ್ಟು? (ಮಾರ್ಚ್ 27, 2026)
ಇಂದು (ಶುಕ್ರವಾರ) ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 160 ರೂಪಾಯಿ ಏರಿಕೆಯಾಗಿದೆ.
24 ಕ್ಯಾರೆಟ್ ಚಿನ್ನ (10 ಗ್ರಾಂ): ₹1,44,710 (ಇಂದು ₹160 ಏರಿಕೆ)
1 ಗ್ರಾಂ ಚಿನ್ನದ ಬೆಲೆ: ₹14,471 (ಇಂದು ₹16 ಏರಿಕೆ)
ದಿನದ ವಹಿವಾಟಿನ ಅಂತ್ಯಕ್ಕೆ ಚಿನ್ನದ ಬೆಲೆ ಮತ್ತೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ
ಬೆಳ್ಳಿ ಕೊಳ್ಳುವವರಿಗೆ ಇಂದು ನಿಜಕ್ಕೂ ಗುಡ್ ನ್ಯೂಸ್. ಒಂದೇ ದಿನದಲ್ಲಿ ಬೆಳ್ಳಿ ಬೆಲೆ ₹10,100 ರಷ್ಟು ಕುಸಿತ ಕಂಡಿದೆ.ಇಂದಿನ ಬೆಳ್ಳಿ ಬೆಲೆ (1 ಕೆಜಿ): ₹2,40,000 ಗಮನಾರ್ಹವೆಂದರೆ, ಮಾರ್ಚ್ 2 ರಂದು ₹3.15 ಲಕ್ಷ ತಲುಪಿದ್ದ ಬೆಳ್ಳಿ ಬೆಲೆ, ಈಗ ಹಂತಹಂತವಾಗಿ ಇಳಿಕೆಯಾಗುತ್ತಿದ್ದು, ಒಟ್ಟಾರೆ ₹80 ಸಾವಿರದಷ್ಟು ಕಮ್ಮಿಯಾಗಿದೆ.
ಇಂದು ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ (24K) ಚಿನ್ನದ ಬೆಲೆ (ಪ್ರತಿ ಗ್ರಾಂ):
ಚೆನ್ನೈ: ₹14,651
ಮುಂಬೈ: ₹14,471
ದೆಹಲಿ: ₹14,486
ಕೋಲ್ಕತಾ: ₹14,471
ಬೆಂಗಳೂರು: ₹14,471
ಹೈದರಾಬಾದ್: ₹14,471
ಕೇರಳ: ₹14,471
ಪುಣೆ: ₹14,471
ವಡೋದರಾ: ₹14,476
ಅಹಮದಾಬಾದ್: ₹14,476

