ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಈಗ ನಿಜವಾದ ಅಲ್ಲೋಲ ಕಲ್ಲೋಲ ಶುರುವಾಗಿದೆ. ಹೂಡಿಕೆದಾರರು ಫುಲ್ ಖುಷ್ ಆಗಿದ್ದರೆ, ಮದುವೆ-ಮುಂಜಿ ಅಂತ ಪ್ಲಾನ್ ಮಾಡಿದ್ದ ಜನ ಮಾತ್ರ ಬೆಲೆ ಕೇಳಿ ಬೆಚ್ಚಿಬೀಳುತ್ತಿದ್ದಾರೆ. ನೋಡನೋಡುತ್ತಿದ್ದಂತೆಯೇ ಬೆಳ್ಳಿ ಕೆಜಿಗೆ 4 ಲಕ್ಷದ ಗಡಿ ದಾಟಿದ್ದರೆ, ಚಿನ್ನದ ಬೆಲೆ ಈಗ 1.80 ಲಕ್ಷದ ಹತ್ತಿರಕ್ಕೆ ಬಂದು ನಿಂತಿದೆ
ಬೆಳ್ಳಿಯ ಹ್ಯಾಟ್ರಿಕ್ ಧಮಾಕಾ
ಬಿಳಿ ಲೋಹ ಬೆಳ್ಳಿ ಸತತ ಮೂರು ದಿನಗಳಿಂದ ದಾಖಲೆ ಮಟ್ಟದಲ್ಲಿ ಏರಿಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ. ಕೇವಲ ಮೂರೇ ದಿನಗಳಲ್ಲಿ ಬರೋಬ್ಬರಿ ₹65,000 ಏರಿಕೆಯಾಗಿರೋದು ಮಾರುಕಟ್ಟೆ ತಜ್ಞರ ಕಣ್ಣು ಕೆಂಪಾಗಿಸಿದೆ.
ಬೆಳ್ಳಿಯ ಜಿಗಿತದ ಹಾದಿ:
ಮಂಗಳವಾರ: ₹40,500 ಏರಿಕೆ
ಬುಧವಾರ: ₹15,000 ಏರಿಕೆ
ಇಂದು (ಗುರುವಾರ): ಮತ್ತೆ ಜಿಗಿತ ಕಂಡ ಬೆಲೆ ಈಗ ಕೆಜಿಗೆ ₹4,10,000
ಬೆಂಗಳೂರಿನಲ್ಲಿ ಇಂದಿನ (ಜನವರಿ 29, 2026) ದರ ವಿವರ:
ಚಿನ್ನದ ಬೆಲೆಯಲ್ಲೂ ಇಂದು ಭಾರಿ ವ್ಯತ್ಯಾಸವಾಗಿದ್ದು, ಒಂದೇ ದಿನ 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ ₹11,770 ಹೆಚ್ಚಳವಾಗಿದೆ
ಲೋಹದ ವಿಧ ತೂಕ ಇಂದಿನ ದರ (ಅಂದಾಜು)
24 ಕ್ಯಾರೆಟ್ ಚಿನ್ನ 10 ಗ್ರಾಂ ₹1,78,850
22 ಕ್ಯಾರೆಟ್ ಚಿನ್ನ 10 ಗ್ರಾಂ ₹1,63,950
ಬೆಳ್ಳಿ (Silver) 1 ಕೆಜಿ ₹4,10,000
ಬೆಲೆ ಏರಿಕೆಗೆ ಅಸಲಿ ಕಾರಣವೇನು?
ಜಾಗತಿಕ ಉದ್ವಿಗ್ನತೆ: ದೇಶಗಳ ನಡುವಿನ ಯುದ್ಧದ ಕಾರ್ಮೋಡ ಮತ್ತು ಅನಿಶ್ಚಿತತೆ.
ಡಾಲರ್ ದುರ್ಬಲತೆ: ಅಮೆರಿಕದ ಡಾಲರ್ ಮೌಲ್ಯ ಕುಸಿಯುತ್ತಿರುವುದು ಹೂಡಿಕೆದಾರರನ್ನು ಚಿನ್ನದತ್ತ ಸೆಳೆಯುತ್ತಿದೆ.
ಸುರಕ್ಷಿತ ಹೂಡಿಕೆ: ಶೇರ್ ಮಾರ್ಕೆಟ್ ಏರಿಳಿತದ ನಡುವೆ ಚಿನ್ನವನ್ನು ಸೇಫ್ ಅಸೆಟ್ ಎಂದು ಜನರು ನಂಬುತ್ತಿದ್ದಾರೆ.
ಪ್ರಮುಖ ನಗರಗಳಲ್ಲಿ ಇಂದಿನ (ಜನವರಿ 29, 2026) 24 ಕ್ಯಾರೆಟ್ (ಶುದ್ಧ ಚಿನ್ನ) ದರದ ಪಟ್ಟಿ ಇಲ್ಲಿದೆ:
ಇಂದಿನ 24K ಚಿನ್ನದ ದರ ಪಟ್ಟಿ (10 ಗ್ರಾಂಗೆ)ನಗರ (City)24K ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು (Bangalore)₹ 1,62,050.00
ಚೆನ್ನೈ (Chennai)₹ 1,63,300.00
ದೆಹಲಿ (Delhi)₹ 1,62,220.00
ಮುಂಬೈ (Mumbai)₹ 1,62,080.00
ಕೋಲ್ಕತ್ತಾ (Kolkata)₹ 1,62,060.00
ಪುಣೆ (Pune)₹ 1,62,100.00

