HomeEntertainmentಶೀಘ್ರದಲ್ಲೇ ತೆರೆ ಮೇಲೆ ಬರಲಿದೆ ಸಿದ್ದಾರ್ಥ್ ನಟನೆಯ 'ಮಿಸ್ ಯು'

ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ ಸಿದ್ದಾರ್ಥ್ ನಟನೆಯ ‘ಮಿಸ್ ಯು’

ಸಿದ್ದಾರ್ಥ್ ಹಾಗೂ ಸ್ಯಾಂಡಲ್ ವುಡ್ ನ ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಮಿಸ್ ಯು ಚಿತ್ರ ಶೂಟಿಂಗ್ ಈಗಾಗಲೇ ಪೂರ್ಣ ಬಹುತೇಕ ಕಂಪ್ಲೀಟ್ ಆಗಿದ್ದು ಇನ್ನೇನು ಕೊನೆಯ ಹಂತದಲ್ಲಿದೆ. ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಈ ಚಿತ್ರವನ್ನು 7 ಮೈಲ್ ಪರ್ ಸೆಕೆಂಡ್  ಬ್ಯಾನರ್ ನಡಿ ಸ್ಯಾಮ್ಯುವೆಲ್ ನಿರ್ಮಾಣ ಮಾಡಿದ್ದು, ಸಿದ್ದಾರ್ಥ್ ಹಾಗೂ ಆಶಿಕಾ ರಂಗನಾಥ್ ಸೇರಿದಂತೆ ಕರುಣಾಕರನ್, ಬಾಲಸರವಣನ್,  ಮಾರನ್, ಸಾಸ್ತಿಕ ಬಣ್ಣ ಹಚ್ಚಿದ್ದಾರೆ. ಘಿಬ್ರಾನ್ ವೈಭೋದ ಸಂಗೀತ ಸಂಯೋಜನೆ ನೀಡಿದ್ದು, ದಿನೇಶ್ ಪೊನ್ರಾಜ್ ಸಂಕಲನ, ಆರ್ ಅಶೋಕ್ ಸಂಭಾಷಣೆ ದಿನೇಶ್ ಕಾಸಿ ಸಾಹಸ ನಿರ್ದೇಶನ ದಿನೇಶ್ ನೃತ್ಯ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular