HomeEntertainmentಸಿದ್ದಾರ್ಥ್ ಹಾಗೂ ಆಶಿಕಾ ರಂಗನಾಥ್ ಅಭಿನಯದ 'ಮಿಸ್ ಯು' ಟೀಸರ್ ರಿಲೀಸ್

ಸಿದ್ದಾರ್ಥ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ‘ಮಿಸ್ ಯು’ ಟೀಸರ್ ರಿಲೀಸ್

ದಕ್ಷಿಣ ಭಾರತದ ಖ್ಯಾತ ನಟ ಸಿದ್ದಾರ್ಥ್ ಹಾಗೂ ಆಶಿಕಾ ರಂಗನಾಥ್ ಅಭಿನಯಿಸಿರುವ ‘ಮಿಸ್ ಯು’ ಚಿತ್ರ ಈಗಾಗಲೇ ತನ್ನ ಹಾಡಿನ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದೆ ನವೆಂಬರ್ 29 ರಂದು ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಈ ಚಿತ್ರದ ಟೀಸರ್ ಇಂದು ಟಿ ಸೀರೀಸ್ ತಮಿಳು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ.

ಈ ಚಿತ್ರವನ್ನು 7 ಮೈಲ್ಸ್ ಪರ್ ಸೆಕೆಂಡ್ ಬ್ಯಾನರ್ ನಲ್ಲಿ ಸ್ಯಾಮ್ಯುಯೆಲ್ ಮ್ಯಾಥ್ಯೂ ನಿರ್ಮಾಣ ಮಾಡಿದ್ದು, ಸಿದ್ಧಾರ್ಥ್, ಆಶಿಕಾ ರಂಗನಾಥ್, ಕರುಣಾಕರನ್, ಬಾಲಸರವಣನ್, ಸಾಸ್ತಿಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನೇಶ್ ಪೊನ್ರಾಜ್ ಸಂಕಲನ, ಆರ್ ಅಶೋಕ್ ಸಂಭಾಷಣೆ, ದಿನೇಶ್ ಕಾಸಿ ಸಾಹಸ ನಿರ್ದೇಶನ, ಹಾಗೂ ದಿನೇಶ್ ಅವರ ನೃತ್ಯ ನಿರ್ದೇಶನವಿದೆ. ಜಿಬ್ರಾನ್ ವೈಭೋಡ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular