HomeLatest NewsBREAKING: ಬಾಹ್ಯಾಕಾಶ ನಿಲ್ದಾಣದಲ್ಲಿರುವ ಶುಭಾಂಶು ಶುಕ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ: ಇತಿಹಾಸ ಸೃಷ್ಟಿಸಿದ್ದಕ್ಕೆ ಅಭಿನಂದನೆ

BREAKING: ಬಾಹ್ಯಾಕಾಶ ನಿಲ್ದಾಣದಲ್ಲಿರುವ ಶುಭಾಂಶು ಶುಕ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ: ಇತಿಹಾಸ ಸೃಷ್ಟಿಸಿದ್ದಕ್ಕೆ ಅಭಿನಂದನೆ

ನವದೆಹಲಿ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾನಿ ಶುಭಾಂಶು ಶುಕ್ಲಾ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.

ಗಗನಯಾನಿ ಶುಭಾಂಶು ಶುಕ್ಲಾ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದು, ಶುಭಾಂಶು ಶುಕ್ಲಾ ಅವರಿಗೆ ಇತಿಹಾಸ ಸೃಷ್ಟಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ನಿಮ್ಮ ಪ್ರಯಾಣ ಎಲ್ಲಾ ಭಾರತೀಯರಿಗೂ ಸ್ಫೂರ್ತಿ. ಶುಭಾಂಶು ನೀವು ತುಂಬಾ ಸರಳ ವ್ಯಕ್ತಿ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಈ ವೇಳೆ ಶುಭಾಂಶು ಶುಕ್ಲಾ ಪ್ರಧಾನಿಯವರಿಗೆ ಬಾಹ್ಯಾಕಾಶದಿಂದ ಭಾರತ ಸುಂದರವಾಗಿ, ಭವ್ಯವಾಗಿ ಕಾಣುತ್ತಿದೆ. ಇಡೀ ಭೂಮಿ ಒಂದಾಗಿ ಕಂಡುಬರುತ್ತಿ ಎಂದು ವಿವರಿಸಿದ್ದಾರೆ. ಇಲ್ಲಿ ಮಲಗುವುದೇ ಒಂದು ದೊಡ್ದ ಸಾಹಸ ಎಂದು ತಿಳಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ, ನಿಮ್ಮ ಜೊತೆ ಮಾತನಾಡಿದ್ದು ಬಹಳ ಸಂತಸವಾಗಿದೆ. ನಿಮ್ಮ ಪ್ರಯಾಣ ವಿಕಸಿತ ಭಾರತಕ್ಕೆ ಹೊಸ ವೇಗವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೂನ್ 25ರಂದು ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾನಿಗಳು ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ ಎಕ್ಸ್ ನ ಡ್ರಾಗನ್ ಕ್ಯಾಪ್ಸುಲ್ ನಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ-ಐಎಸ್ ಎಸ್ ಗೆ ಹಾರಿದ್ದರು. ನಾಲ್ವರು ಗಗನಯಾನಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಲಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular