HomeLatest NewsBREAKING: ಕಾಲ್ತುಳಿತ ದುರಂತ: ವಿಚಾರಣೆಗೆ ಹಾಜರಾಗಿ ನ್ಯಾ.ಮೈಕೆಲ್ ಕುನ್ಹಾ ಸಮಿತಿ ಮುಂದೆ ಹೇಳಿಕೆ ದಾಖಲಿಸಿದ ದಯಾನಂದ್

BREAKING: ಕಾಲ್ತುಳಿತ ದುರಂತ: ವಿಚಾರಣೆಗೆ ಹಾಜರಾಗಿ ನ್ಯಾ.ಮೈಕೆಲ್ ಕುನ್ಹಾ ಸಮಿತಿ ಮುಂದೆ ಹೇಳಿಕೆ ದಾಖಲಿಸಿದ ದಯಾನಂದ್

ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಮಿಷನರ್ ಬಿ.ದಯಾನಂದ್ ತನಿಖಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ನಿವೃತ್ತ ನ್ಯಾ.ಮೈಕೆಲ್ ಕುನ್ಹಾ ಸಮಿತಿಯ ಮುಂದೆ ಹಾಜರಾದ ಬಿ.ದಯಾನಂದ್, ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ನಿವೃತ್ತ ನ್ಯಾ.ಮೈಕೆಲ್ ಕುನ್ಹಾ ಸಮಿತಿ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಕಾಲ್ತುಳಿತ ದುರಂತದ ವೇಳೆ ದಯಾನಂದ್ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದರು. ಕಾಲ್ತುಳಿತ ದುರಂತ ಪ್ರಕರಣದಲ್ಲಿ ಕಮಿಷನರ್ ದಯಾನಂದ್ ಸೇರಿದಂತೆ ಹಲವು ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular