HomeEntertainmentತೀವ್ರ ಅಲರ್ಜಿಯಿಂದ ನಟಿ ಶ್ರುತಿ ಹಾಸನ್ ಕಂಗಾಲು: ಪರ್ಷಿಯನ್ ಬೆಕ್ಕನ್ನು ದತ್ತು ನೀಡಲು ಬಲವಾದ ಕಾರಣ...

ತೀವ್ರ ಅಲರ್ಜಿಯಿಂದ ನಟಿ ಶ್ರುತಿ ಹಾಸನ್ ಕಂಗಾಲು: ಪರ್ಷಿಯನ್ ಬೆಕ್ಕನ್ನು ದತ್ತು ನೀಡಲು ಬಲವಾದ ಕಾರಣ ಇಲ್ಲಿದೆ!

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ನಟಿ ಶ್ರುತಿ ಹಾಸನ್ ತಮ್ಮ ಪ್ರೀತಿಯ ಸಾಕು ಬೆಕ್ಕನ್ನು ತೊರೆಯಬೇಕಾದ ಅತ್ಯಂತ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ಅಷ್ಟೇ ಅವರು ಅಸ್ಲಾನ್ ಎಂಬ ಪರ್ಷಿಯನ್ ತಳಿಯ ಬೆಕ್ಕನ್ನು ದತ್ತು ಪಡೆದುಕೊಂಡಿದ್ದರು. ಆದರೆ, ತೀವ್ರ ರೀತಿಯ ಆರೋಗ್ಯ ಸಮಸ್ಯೆಯಿಂದಾಗಿ ಭಾರವಾದ ಮನಸ್ಸಿನಿಂದ ಅದನ್ನು ಮತ್ತೆ ದತ್ತು ನೀಡಲು ಮುಂದಾಗಿದ್ದಾರೆ. ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅಸ್ಲಾನ್ ಮನೆಗೆ ಬಂದ ಕೇವಲ ಎರಡೇ ದಿನಗಳಲ್ಲಿ ಶ್ರುತಿ ಹಾಸನ್ ಅವರಿಗೆ ಚರ್ಮದ ಅಲರ್ಜಿ ಕಾಣಿಸಿಕೊಂಡಿದೆ. ಆರಂಭದಲ್ಲಿ ಇದು ಆಹಾರದ ಸಮಸ್ಯೆಯಿಂದ ಆಗಿರಬಹುದು ಎಂದು ಭಾವಿಸಿದ್ದ ಅವರಿಗೆ, ನಂತರ ಬೆಕ್ಕಿನ ಉಣ್ಣೆ ಮತ್ತು ಲಾಲಾರಸದಿಂದಲೇ ಈ ಅಲರ್ಜಿ ತೀವ್ರಗೊಳ್ಳುತ್ತಿದೆ ಎಂಬುದು ಅರಿವಿಗೆ ಬಂದಿದೆ. ಮುಖದ ಮೇಲೆ ದದ್ದುಗಳು ಮತ್ತು ಗುಳ್ಳೆಗಳು ಏಳಲು ಪ್ರಾರಂಭಿಸಿದಾಗ ಅವರು ಚರ್ಮ ರೋಗ ತಜ್ಞರನ್ನು ಸಂಪರ್ಕಿಸಿದ್ದಾರೆ.

ಅಸ್ಲಾನ್‌ನನ್ನು ತಮ್ಮೊಂದಿಗೇ ಇಟ್ಟುಕೊಳ್ಳಲು ಶ್ರುತಿ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಬೆಕ್ಕಿನ ಕೂದಲು ಕತ್ತರಿಸುವುದು, ಏರ್ ಪ್ಯೂರಿಫೈಯರ್ ಬಳಸುವುದು, ಆತನ ಆಹಾರ ಬದಲಾಯಿಸುವುದು ಹಾಗೂ ಅಲರ್ಜಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ಸೇರಿದಂತೆ ಹಲವು ಕ್ರಮಗಳನ್ನು ಅನುಸರಿಸಿದರು. ಆದರೆ, ಯಾವ ಪ್ರಯತ್ನವೂ ಫಲ ನೀಡಲಿಲ್ಲ. ಪ್ರಯಾಣ ಮುಗಿಸಿ ಮನೆಗೆ ಬಂದಾಗಲೆಲ್ಲಾ ಅವರಿಗೆ ಅಲರ್ಜಿ ಮತ್ತಷ್ಟು ಹೆಚ್ಚಾಗುತ್ತಿತ್ತು. ಇದು ಅವರ ಕೆಲಸ, ದೈಹಿಕ ಆರೋಗ್ಯ ಮತ್ತು ಮಾನಸಿಕ ಶಾಂತಿಯ ಮೇಲೆಯೂ ಗಂಭೀರ ಪರಿಣಾಮ ಬೀರಲು ಪ್ರಾರಂಭಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊನೆಗೆ ಬೇರೆ ದಾರಿ ಕಾಣದೆ, ಅಸ್ಲಾನ್‌ನನ್ನು ಮುಂಬೈನಲ್ಲಿದ್ದ ಆತನ ಹಳೆಯ ಆರೈಕೆದಾರರ ಬಳಿಗೆ ಕಳುಹಿಸಿದ್ದಾರೆ. ಪ್ರಸ್ತುತ ಅಸ್ಲಾನ್‌ಗೆ ಮತ್ತೊಂದು ಪ್ರೀತಿಯ ಮನೆ ಹುಡುಕುವ ಕೆಲಸ ನಡೆಯುತ್ತಿದೆ. ಮೂಕ ಪ್ರಾಣಿಗೆ ಪರಿಸ್ಥಿತಿಯನ್ನು ವಿವರಿಸಲು ಸಾಧ್ಯವಾಗದೇ ಇರುವುದಕ್ಕೆ ತೀವ್ರ ಅಪರಾಧ ಪ್ರಜ್ಞೆ ಕಾಡುತ್ತಿದೆ ಎಂದು ಶ್ರುತಿ ಹೇಳಿಕೊಂಡಿದ್ದಾರೆ. ‘ಇದು ದತ್ತು ಪಡೆಯುವಲ್ಲಿ ಆದ ಸೋಲಲ್ಲ, ಬದಲಿಗೆ ನನ್ನ ದೇಹದ ಅಲರ್ಜಿ ಮುಂದೆ ನಾನು ಸೋತೆ’ ಎಂದು ಅವರು ಅತ್ಯಂತ ಭಾವುಕರಾಗಿ ಬರೆದುಕೊಂಡಿದ್ದಾರೆ.

https://www.instagram.com/reel/DaNdV9qI4cj

https://www.instagram.com/p/DYO867REjht

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular