HomeLatest NewsBREAKING: ಮಾವು ಬೆಳೆಗೆ ಬೆಂಬಲ ಬೆಲೆಗೆ ಆಗ್ರಹ: ನಾಳೆ ಶ್ರೀನಿವಾಸಪುರ ತಾಲೂಕು ಬಂದ್ ಗೆ ಕರೆ

BREAKING: ಮಾವು ಬೆಳೆಗೆ ಬೆಂಬಲ ಬೆಲೆಗೆ ಆಗ್ರಹ: ನಾಳೆ ಶ್ರೀನಿವಾಸಪುರ ತಾಲೂಕು ಬಂದ್ ಗೆ ಕರೆ

ಕೋಲಾರ: ಮಾವು ಬೆಳೆಗೆ ಬೆಲೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕಂಗಾಲಾಗಿರುವ ಕೋಲಾರ ರೈತರು, ಮಾವು ಬೆಳೆಗಾರರು ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿದ್ದಾರೆ.

ಮಾವಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ನಾಳೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಬಂದ್ ಗೆ ಮಾವು ಬೆಳೆಗಾರರ ಸಂಘಟನೆ ನಿರ್ಧರಿಸಿದೆ. ಶ್ರೀನಿವಾಸಪುರದ ಮಾವು ಮಾರ್ಕೆಟ್ ನಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಳೆ ಶ್ರೀನಿವಸಪುರ ಬಂದ್ ಗೆ ತೀರ್ಮಾನಿಸಲಾಗಿದೆ. ಶ್ರೀನಿವಸಪುರ ಬಂದ್ ಗೆ ಪ್ರಾಂತ ರೈತ ಸಂಘಟನೆ, ಸೇರಿದಂತೆ ವಿವಿಧ ಸಂಘಟನೆಗಳು, ಬಿಜೆಪಿ-ಜೆಡಿಎಸ್ ಕೂಡ ಬೆಂಬಲಿಸಿದ್ದು, ನಾಳೆ ಶ್ರೀನಿವಾಸಪುರ ತಾಲೂಕು ಸಂಪೂರ್ಣ ಸ್ತಬ್ಧಗೊಳ್ಳಲಿದೆ.

For Latest News Updates, Join Our Whatsapp Community🚩
RELATED ARTICLES

Most Popular