HomeLatest Newsಹೆಣ್ಣುಮಕ್ಕಳು ಕಂಡಕೂಡಲೆ ತಬ್ಬಿ, ಚುಂಬಿಸಿ ಪರಾರಿಯಾಗುತ್ತಿದ್ದ ಕಾಮುಕ ಅರೆಸ್ಟ್!

ಹೆಣ್ಣುಮಕ್ಕಳು ಕಂಡಕೂಡಲೆ ತಬ್ಬಿ, ಚುಂಬಿಸಿ ಪರಾರಿಯಾಗುತ್ತಿದ್ದ ಕಾಮುಕ ಅರೆಸ್ಟ್!

ಬೆಂಗಳೂರು: ಬೆಂಗಳೂರಿನಲ್ಲಿ ಹೆಣ್ಣುಮಕ್ಕಳು ಕಂಡ ಕೂಡಲೇ ತಬ್ಬಿ, ಚುಂಬಿಸಿ ಪರಾರಿಯಾಗುತ್ತಿದ್ದ ವಿಕ್ಋತ ಕಾಮುಕನನ್ನು ಪುಲಕೇಶಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮದನ್ (37) ಎಂದು ಗುರುತಿಸಲಾಗಿದೆ. ಮಹಿಳೆಯರು ಒಬ್ಬಂಟಿಯಾಗಿ ಹೋಗುತ್ತಿರುವುದನ್ನು ಕಂಡರೆ ಹಿಂಬಾಲಿಸಿಕೊಂಡು ಬಂದು ಬಲವಂತದಿಂದ ತಬ್ಬಿ, ಮುತ್ತಿಟ್ಟು ಎಸ್ಕೇಪ್ ಆಗುತ್ತಿದ್ದ. ಸಾಲದ್ದಕ್ಕೆ ನನ್ನನ್ನು ಯಾರು ಏನೂ ಮಾಡಲು ಆಗಲ್ಲ ಎಂದು ಧಮ್ಕಿ ಹಾಕುತ್ತಿದ್ದ.

ಬೆಂಗಳೂರಿನ ವಿವಿಧ ಉದ್ಯಾನವನಗಳು, ಸಣ್ಣ ಪಾರ್ಕ್ ಗಳು, ರಸ್ತೆ, ಮೈದಾನಗಳಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದ ಮಹಿಳೆಯರು, ಯುವತಿಯರೇ ಈತನ ಟಾರ್ಗೆಟ್. ಹಲವು ಮಹಿಳೆಯರು ಈತನಿಂದ ದೌರ್ಜನ್ಯಕ್ಕೆ ಒಳಗಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಮೊಸ್ ಅಂಗಡಿ ಮುಂದೆ ನಿಂತಿದ್ದ ಯುವತಿಯ ತುಟಿಗೆ ಮುತ್ತಿಟ್ಟು ಕಾಮುಕ ಪರಾರಿಯಾಗಿದ್ದ. ಅದೇ ದಿನ ಅದೇ ಏರಿಯಾದ ಪಾರ್ಕ್ ನಲ್ಲಿ ಮಹಿಳೆ ವಾಕಿಂಗ್ ತೆರಳಿದ್ದಾಗ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ತಬ್ಬಿ, ಮುತ್ತಿಟ್ಟಿದ್ದ. ಈ ಬಗ್ಗೆ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಮದನ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಸದ್ಯ ಬಾಣಸವಾಡಿಯಲ್ಲಿ ಕಾಮುಕ ಮದನ್ ಸೆರೆ ಸಿಕ್ಕಿದ್ದಾನೆ. ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮದನ್, ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಅಶ್ಲೀಲ ವಿಡಿಯೋ ನೋಡುವುದನ್ನೇ ಕಾಯಕ ಮಾಡಿಕೊಂಡಿದ್ದ ಈತ ಬಳಿಕ ಕಂಡ ಕಂಡ ಮಹಿಳೆಯರನ್ನು ತಬ್ಬಿ ದೌರ್ಜನ್ಯವೆಸಗುತ್ತಿದ್ದ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular