HomeIndiaಸಿಲಿಂಡರ್ ಸಮಸ್ಯೆ: ಸಹಕಾರ ನೀಡಿ ಎಂದು ಉದ್ಯೋಗಿಗಳಿಗೆ ಇನ್ಫೋಸಿಸ್ ಮನವಿ

ಸಿಲಿಂಡರ್ ಸಮಸ್ಯೆ: ಸಹಕಾರ ನೀಡಿ ಎಂದು ಉದ್ಯೋಗಿಗಳಿಗೆ ಇನ್ಫೋಸಿಸ್ ಮನವಿ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ಹಠಾತ್ ವ್ಯತ್ಯಯ  ದೇಶದಾದ್ಯಂತ ಸಂಕಷ್ಟಕ್ಕೆ ಕಾರಣವಾಗಿದೆ. ಹೋಟೆಲ್, ರೆಸ್ಟೋರೆಂಟ್, ಕಲ್ಯಾಣ ಮಂಟಪ, ಕೊನೆಗೆ ಐಟಿ ಉದ್ಯಮಕ್ಕೂ ಇದರ ಬಿಸಿ ತಟ್ಟಿದೆ.

ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾದ ಬಳಿಕ ಹೆಚ್ಚು ಪರಿಣಾಮ ಉಂಟಾಗಿರುವ ನಗರಗಳಲ್ಲಿ ಪುಣೆ ಸಹ ಒಂದು. ಈಗ ಪುಣೆಯಲ್ಲಿ ಐಟಿ ಕಂಪನಿ ಇನ್ಫೋಸಿಸ್ ಉದ್ಯೋಗಿಗಳಿಗೆ ಮನವಿಯೊಂದನ್ನು  ಮಾಡಿದೆ.

ಸಿಲಿಂಡರ್ ಸಮಸ್ಯೆಯ ಹಿನ್ನಲೆಯಲ್ಲಿ ಕಚೇರಿಯ ಕೆಫೆಟೇರಿಯಾದ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದೆ. ಉದ್ಯೋಗಿಗಳು ಸಹಕಾರ ನೀಡಬೇಕು ಎಂದು ಹೇಳಿದೆ. ಈ ಕುರಿತು ಎಲ್ಲಾ ಉದ್ಯೋಗಿಗಳಿಗೆ ಇ-ಮೇಲ್ ಕಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇ-ಮೇಲ್‌ನ ಪ್ರಮುಖ ಅಂಶಗಳು

  • ಫುಡ್ ಕೋರ್ಟ್‌ ಮೇಲೆ ಎಲ್‌ಪಿಜಿ ಸಿಲಿಂಡರ್‌ಗಳ ಸಮಸ್ಯೆ ಪರಿಣಾಮ ಬೀರಿದೆ.
  • ಕೆಫೆಟೇರಿಯಾದಲ್ಲಿ ಸೀಮಿತ ಆಹಾರದ ಆಯ್ಕೆಗಳನ್ನು ಮಾತ್ರ ನೀಡಲಾಗಿದೆ.
  • ಹೊರಗಿನ ಕಿಚನ್‌ನಿಂದ ಆಹಾರವನ್ನು ತರಿಸಲಾಗುತ್ತಿದೆ.
  • ಮನೆಯಿಂದಲೇ ಊಟ ತರುವಂತೆ ಉದ್ಯೋಗಿಗಳಿಗೆ ಸಲಹೆ.
  • ಕ್ಯಾಂಪಸ್ ಒಳಗೆ ಇವೆಂಟ್ ಆಯೋಜಿಸುವಾಗ ಕ್ಯಾಟರಿಂಗ್ ಬಗ್ಗೆ ಗಮನ ಕೊಡಿ.
  • ಹೆಚ್ಚಿನ ಉದ್ಯೋಗಿಗಳು ಕಚೇರಿಗೆ ಬರುವುದನ್ನು ತಪ್ಪಿಸಲು WFH ಬಗ್ಗೆ ಚಿಂತನೆ.

ಸಿಲಿಂಡರ್ ಸಮಸ್ಯೆಯ ಪರಿಸ್ಥಿತಿಯು ಕಂಪನಿಯ ನಿಯಂತ್ರಣ ಮೀರಿದೆ. ಆದರೆ ಕಟ್ಟುನಿಟ್ಟಾದ ರಿಟರ್ನ್-ಟು-ಆಫೀಸ್ (ಕಚೇರಿಗೆ ಮರಳಿ) ನೀತಿ ಅಡಿಯಲ್ಲಿ ಸಾವಿರಾರು ಉದ್ಯೋಗಿಗಳು ಕಚೇರಿಗೆ ಹಾಜರಾಗುವುದು ಅನಿವಾರ್ಯವಾಗಿದೆ.

ಇಂತಹ ಸಂದರ್ಭಗಳಲ್ಲಿ ಉದ್ಯೋಗಿಗಳ ಅನಾನುಕೂಲತೆಯನ್ನು ಕಡಿಮೆ ಮಾಡಲು ಕಂಪನಿ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ನೀಡುವ ಕುರಿತು ಚಿಂತನೆಯನ್ನು ನಡೆಸುತ್ತಿದೆ ಎಂದು ಹೇಳಿದೆ.

ಸಿಲಿಂಡರ್ ಸಮಸ್ಯೆ ಅಪ್‌ಡೇಟ್: ಸದ್ಯಕ್ಕೆ ಗೃಹ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಿಲಿಂಡರ್ ಬುಕ್ ಮಾಡಿದ ಒಂದೆರಡು ದಿನಗಳಲ್ಲಿ ಮನೆಗಳಿಗೆ ಅಡುಗೆ ಅನಿಲ ಪೂರೈಕೆ ಆಗುತ್ತಿದೆ. ಆದರೆ ಸಿಲಿಂಡರ್ ಸಿಗುವುದಿಲ್ಲ ಎಂದು ಆತಂಕಗೊಂಡು ಎಲ್ಲರೂ ಒಟ್ಟಿಗೆ ಬುಕ್ ಮಾಡಬೇಡಿ ಎಂದು ಸರ್ಕಾರಗಳು ಮನವಿ ಮಾಡಿವೆ.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿದೆ. ಆದ್ದರಿಂದ ಬೆಂಗಳೂರು ಸೇರಿದಂತೆ ವಿವಿಧ ಮಹಾನಗರದಲ್ಲಿ ಹೋಟೆಲ್‌, ರೆಸ್ಟೋರೆಂಟ್, ಕೆಟರಿಂಗ್‌ಗಳಿಗೆ ತೊಂದರೆಯಾಗುತ್ತಿದೆ.

ಹಲವು ಹೋಟೆಲ್‌ಗಳು ಮುಚ್ಚಿವೆ, ಮೆನು ಕಡಿಮೆ ಮಾಡಿವೆ, ಹೆಚ್ಚು ಸಿಲಿಂಡರ್ ಬೇಕಾಗುವ ದೋಸೆ, ಪೂರಿ ಮುಂತಾದ ಖಾದ್ಯಗಳು ಸದ್ಯಕ್ಕೆ ಲಭ್ಯವಿಲ್ಲ ಎಂದು ಬೋರ್ಡ್ ಹಾಕಿವೆ. ಕೆಲವು ರೆಸ್ಟೋರೆಂಟ್‌ಗಳು ಕಟ್ಟಿಗೆ ಒಲೆಯ ಮೊರೆ ಹೋಗಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular