HomeKarnatakaರೈತರ ಮಕ್ಕಳಿಗಾಗಿ ತೋಟಗಾರಿಕೆ ತರಬೇತಿ ; ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ರೈತರ ಮಕ್ಕಳಿಗಾಗಿ ತೋಟಗಾರಿಕೆ ತರಬೇತಿ ; ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಧಾರವಾಡ :   ಧಾರವಾಡ ಜಿಲ್ಲೆಯ ರೈತ ಮಕ್ಕಳಿಗಾಗಿ 2026-27 ನೇ ಸಾಲಿಗೆ 10 ತಿಂಗಳ (ಅವಧಿಯ ದಿನಾಂಕ: 02.05.2026 ರಿಂದ 28.02.2027 ರವರೆಗೆ) ಗದಗ ತೋಟಗಾರಿಕೆ ತರಬೇತಿ ಕೇಂದ್ರದ ಮಹಿಳಾ-05 ಹಾಗೂ ಪುರುಷ–10, ಒಟ್ಟು–15 ಅಭ್ಯರ್ಥಿಗಳಿಗೆ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಧಾರವಾಡ ಜಿಲ್ಲೆಯ ತೋಟಗಾರಿಕೆ ಜಂಟಿ ನಿರ್ದೇಶಕರು (ಜಿಲ್ಲಾಪಂಚಾಯತ) ಧಾರವಾಡ ಕಛೇರಿಯಲ್ಲಿ ಅರ್ಜಿ ಶುಲ್ಕದ ಬಾಬತ್ತು ಸಾಮಾನ್ಯ ಅಭ್ಯರ್ಥಿಗಳಗೆ ರೂ. 30 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ. 15 ಮೌಲ್ಯದ ಇಂಡಿಯನ್ ಪೋಸ್ಟಲ್  ಆರ್ಡರ್ ಅಥವಾ Bank Demand Draft/K-2 Payment Challan ಮುಖಾಂತರ ತೋಟಗಾರಿಕೆ ಜಂಟಿ ನಿರ್ದೇಶಕರು (ಜಿಲ್ಲಾಪಂಚಾಯತ) ಧಾರವಾಡ ರವರ ಹೆಸರಿನಲ್ಲಿ ಪಡೆದು, ಅರ್ಜಿ ಜೊತೆಗೆ ಲಗತ್ತಿಸಬೇಕು.

ಅರ್ಜಿ ಫಾರಂಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ಧಾರವಾಡ ರವರ ಕಛೇರಿಯಲ್ಲಿ ಅಥವಾ ಇಲಾಖಾ ವೆಬ್ ಸೈಟ್ https://horticulturedir.karnataka.gov.in ನಲ್ಲಿ ಮಾರ್ಚ 12, 2026 ರಿಂದ ಏಪ್ರೀಲ್ 13, 2026 ರವರೆಗೆ ಡೌನಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ಪೂರ್ಣ ಪ್ರಮಾಣದ ದಾಖಲಾತಿಗಳೊಂದಿಗೆ ಏಪ್ರೀಲ್ 15, 2026 ರೊಳಗೆ ಸಲ್ಲಿಸಬೆಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2957801 ಗೆ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ಧಾರವಾಡ ಕಛೇರಿಗೆ ಭೇಟಿ ನೀಡಬಹುದು ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular