HomeInternational11 ವರ್ಷದ ಮಗನಿಗೆ ವಿಮಾನ ಹಾರಿಸಲು ಬಿಟ್ಟು ಬಿಯರ್‌ ಕುಡಿಯುತ್ತಾ ಕುಳಿತ ತಂದೆ; ಶಾಕಿಂಗ್‌ ವಿಡಿಯೋ...

11 ವರ್ಷದ ಮಗನಿಗೆ ವಿಮಾನ ಹಾರಿಸಲು ಬಿಟ್ಟು ಬಿಯರ್‌ ಕುಡಿಯುತ್ತಾ ಕುಳಿತ ತಂದೆ; ಶಾಕಿಂಗ್‌ ವಿಡಿಯೋ ವೈರಲ್

Shocking viral video shows father drinking beer while 11-year-old flies plane. (Image courtesy: Twitter)

ಆ ಬಾಲಕನಿಗೆ ಇನ್ನೂ 11 ವರ್ಷ ಅಷ್ಟೆ. ಆತ ಅಬ್ಬಬ್ಬಾ ಅಂದ್ರೆ ಸೈಕಲ್ ಓಡಿಸಬಹುದು. ಬೈಕ್ ಓಡಿಸುವುದಕ್ಕೂ ಆ ವಯಸ್ಸು ಸೂಕ್ತವಲ್ಲ. ಆದರೂ ಆ ಬಾಲಕ ವಿಮಾನದ ಸ್ಟೇರಿಂಗ್ ಹಿಡಿದು, ವಿಮಾನ ಹಾರಿಸುತ್ತಿದ್ದ. ಇಷ್ಟೆ ಆಗಿದ್ದರೆ ಒಂದು ಮಾತಿತ್ತು. ಆದರೆ ಅದೇ ಬಾಲಕನ ಪಕ್ಕದಲ್ಲಿ ಕುತಿದ್ದ ಬಾಲಕನ ತಂದೆ ಬಿಯರ್ ಕುಡಿಯುತ್ತ ಕುಳಿತಿದ್ದ. ಈ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯ ನೋಡಿದವರೆಲ್ಲ ದಂಗಾಗಿದ್ದಾರೆ.

ಈ ಘಟನೆ ಬ್ರೆಜಿಲ್‌ನಲ್ಲಿ ನಡೆದಿದ್ದು, ಇಲ್ಲಿ ಮಗನ ಕೈಯಲ್ಲಿ ಪ್ಲೇನ್ ಓಡಿಸಲು ಹೇಳಿ, ತಾನು ಬಿಯರ್ ಕುಡಿಯುತ್ತ ಕುಳಿತ ಅಪ್ಪ ಕುಳಿತಿರುವುದನ್ನ ನೋಡಬಹುದು. ಹೀಗೆ ಹುಡುಗಾಟ ಮಾಡಲು ಹೋಗಿ ಇವರಿಬ್ಬರೂ ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಈ ವಿಡಿಯೋ ಮರಣಹೊಂದುವ ಮೊದಲು ಮೊಬೈಲ್‌ನಲ್ಲಿ ರಿಕಾರ್ಡ್ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ರೆಜಿಲ್‌ನ ಸಂಶೋಧಕಾರ ಗ್ಯಾರನ್‌ ಮಾಯಾ (42) ಕಳೆದ ಜುಲೈ 29ರಂದು ಮಗ ಫ್ರಾನ್ಸಿಸ್ಕೋ ಮೈಯಾ (11) ಜೊತೆ ಅವಳಿ ಎಂಜಿನ್ ಇರುವ ಬೀಚ್‌‌ಕ್ರಾಫ್ಟ್ ಬ್ಯಾರನ್ 58 ಅರಣ್ಯದ ಬಳಿ ವಿಮಾನದಲ್ಲಿ ಹೊರಟಾಗ ಈ ವಿಮಾನ ಅವಘಡ ಸಂಭವಿಸಿದೆ.

ಈ ವಿಡಿಯೋದಲ್ಲಿ, ಬಾಲಕ ವಿಮಾನದ ಪೈಲಟ್ ಸೀಟ್‌ನಲ್ಲಿ ಕೂತು, ವಿಮಾನ ಫ್ಲೈ ಮಾಡುವುದನ್ನ ನೋಡಬಹುದು. ಇನ್ನೂ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ಬಿಯರ್ ಬಾಟಲಿ ಹಿಡಿದು ಚಿಯರ್ಸ್ ಹೇಳುವುದನ್ನ ಗಮನಿಸಬಹುದು. ಇನ್ನು ಈ ವಿಡಿಯೋ ಯಾವಾಗ ಮಾಡಿರಬಹುದು ಅನ್ನೊ ಮಾಹಿತಿ ಇನ್ನೂ ಅಸ್ಪಷ್ಟವಾಗಿದೆ. ಇದರ ಕುರಿತು ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ಧಾರೆ.

ಬ್ರೆಜಿಲಿಯನ್ ಕಾನೂನಿನ ಪ್ರಕಾರ ಪ್ರೌಢಶಾಲೆ ಪೂರ್ಣಗೊಳಿಸಿದ ನಂತರ ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರು ಲೈಸೆನ್ಸ್ ಪಡೆಯಬೇಕು. ಆ ನಂತರವೇ ಅವರು ವಿಮಾನ ಹಾರಿಸುವುದಕ್ಕೆ ಸಮರ್ಥರಾಗಿರುತ್ತಾರೆ. ಆದರೆ ಈ ವಿಡಿಯೋದಲ್ಲಿ ಬಾಲಕ ಕಾನೂನು ಉಲ್ಲಂಘಿಸಿದ್ದಾನೆ. ಈ ಎಲ್ಲ ಮಾಹಿತಿಯನ್ನ ಕಲೆಹಾಕಿ ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular