HomeIndiaಗಂಗೆಯಲ್ಲಿ ಸ್ನಾನ ಮಾಡುತ್ತಿರುವ ರೀಲ್ಸ್ ಮಾಡಲು ಹೋಗಿ ಮುಳುಗಿ ಮಾಯವಾದ ಯುವಕ

ಗಂಗೆಯಲ್ಲಿ ಸ್ನಾನ ಮಾಡುತ್ತಿರುವ ರೀಲ್ಸ್ ಮಾಡಲು ಹೋಗಿ ಮುಳುಗಿ ಮಾಯವಾದ ಯುವಕ

ಗಂಗೆಯಲ್ಲಿ ಮಿಂದೇಳುತ್ತಿರುವ ರೀಲ್ಸ್ ವಿಡಿಯೋ ಮಾಡಿಕೊಳ್ಳಲು ಯತ್ನಿಸುವ ಸಂದರ್ಭದಲ್ಲಿ ಯುವಕನೊಬ್ಬ ಮುಳುಗಿ ಕಳೆದು ಹೋಗಿದ್ದಾನೆ. ಮಂಗಳವಾರ ಜರುಗಿದ ಈ ಘಟನೆಯ ವಿಡಿಯೋ ಆನ್ಲೈನ್‌ನಲ್ಲಿ ಶೇರ್‌ ಆಗಿದ್ದು, ಇದನ್ನು ಕಂಡ ನೆಟ್ಟಿಗರು ಶಾಕ್ ಆಗಿದ್ದಾರೆ.

ಉತ್ತರ ಪ್ರದೇಶದ ನರೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ನುರಿತ ಈಜುಗಾರರ ನೆರವಿನಿಂದ ಯುವಕನನ್ನು ಪತ್ತೆ ಮಾಡಲು ಪೊಲೀಸರು ಶ್ರಮಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆಗೂ ಎರಡು ದಿನಗಳ ಮುನ್ನ ರಿಶಿಕೇಶದಲ್ಲಿ ಸಹ ಇಂಥದ್ದೇ ಘಟನೆ ನಡೆದಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡಲು ಸ್ನೇಹಿತರೊಂದಿಗೆ ಬಂದಿದ್ದ 28 ವರ್ಷ ವಯಸ್ಸಿನ ಲಕ್ಷ್ಮಣ್ ಎಂಬ ಹರಿಯಾಣಾದ ಯುವಕ ನದಿಯಲ್ಲಿ ಮುಳುಗಿಬಿಟ್ಟಿದ್ದಾನೆ. ಸ್ಥಳೀಯರ ಸಹಾಯದಿಂದ ಆತನ ಸ್ನೇಹಿತನನ್ನು ಪಾರು ಮಾಡಲಾಗಿದೆ.

 

 

For Latest News Updates, Join Our Whatsapp Community🚩
RELATED ARTICLES

Most Popular