HomeLatest NewsFact Check: ಚುನಾವಣೆ ಗೆದ್ದ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದು ಬಿಯರ್ ಹಿಡಿದು ಡಾನ್ಸ್ ಮಾಡಿದ ಟಿವಿಕೆ...

Fact Check: ಚುನಾವಣೆ ಗೆದ್ದ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದು ಬಿಯರ್ ಹಿಡಿದು ಡಾನ್ಸ್ ಮಾಡಿದ ಟಿವಿಕೆ ಅಭ್ಯರ್ಥಿ; ವಿಡಿಯೊ

ತಮಿಳುನಾಡು ರಾಜಕಾರಣದಲ್ಲಿ ಹೊಸ ಅಲೆ ಎದ್ದಿದ್ದು, ನಟ ವಿಜಯ್ ನೇತೃತ್ವದ ಟಿವಿಕೆ ತನ್ನ ಮೊದಲ ಚುನಾವಣೆಯಲ್ಲಿಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಈ ಮೂಲಕ ನಟ ವಿಜಯ್ ಎಂಜಿಆರ್ ಮಾದರಿಯಲ್ಲಿ ತನ್ನ ಮೊದಲ ಚುನಾವಣೆಯಲ್ಲೇ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಸದ್ಯ ಟಿವಿಕೆ 108 ಸ್ಥಾನಗಳಲ್ಲಿ ಗೆದ್ದಿದ್ದು, ಸ್ಪಷ್ಟ ಬಹುಮತಕ್ಕಾಗಿ ಇನ್ನೂ 10 ಸೀಟುಗಳ ಅಗತ್ಯವಿದೆ.

ಹೀಗೆ ಎಲ್ಲೆಡೆ ಟಿವಿಕೆ ಅಬ್ಬರ ಜೋರಾಗಿದ್ದು, ಟಿವಿಕೆಯಿಂದ ಗೆದ್ದು ಎಂಎಲ್‌ಎಗಳಾದ ಸಾಮಾನ್ಯ ಜನರ ಕುರಿತ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಟೊ ಡ್ರೈವರ್ ಹಾಗೂ ವಿಜಯ್ ಕಾರು ಚಾಲಕನ ಪುತ್ರ ಎಂಎಲ್‌ಎ ಆದ ಸ್ಪೂರ್ತಿದಾಯಕ ಸುದ್ದಿಗಳು ಸದ್ದು ಮಾಡುತ್ತಿದ್ದು, ಸದ್ಯ ಇದೀಗ ಟಿವಿಕೆ ಶಾಸಕನೋರ್ವ ಕುಡಿದು ನಶೆಯಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಂಜಾವೂರ್ ಕ್ಷೇತ್ರದಲ್ಲಿ ಗೆದ್ದ ಆರ್. ವಿಜಯ್‌ಸರವಣನ್ ಅವರ ವಿಡಿಯೊ ಇದಾಗಿದ್ದು, ಇದರಲ್ಲಿ ಅವರು ಬಿಯರ್ ಬಾಟಲಿ ಹಿಡಿದು ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಚುನಾವಣೆ ಗೆದ್ದ ಖುಷಿಯಲ್ಲಿ ಮಾಡಿದ ಪಾರ್ಟಿಯ ವಿಡಿಯೊ ಎಂದು ಹಂಚಿಕೊಳ್ಳಲಾಗುತ್ತಿದೆ.

ಆದರೆ ಅಸಲಿಯತ್ತಿಗೆ ಇದು ಹಳೆಯ ವಿಡಿಯೊವಾಗಿದ್ದು, ಈಗ ಚುನಾವಣೆ ಗೆದ್ದ ವಿಜಯ್‌ಸರವಣನ್ ಹೆಸರು ಕೆಡಿಸುವ ಸಲುವಾಗಿ ವೈರಲ್ ಮಾಡಲಾಗುತ್ತಿದೆ ಎಂಬ ಆರೋಪ ಟಿವಿಕೆ ಬಳಗದಿಂದ ಕೇಳಿಬರುತ್ತಿದೆ. ಇನ್ನು ಇದು ಅವರ ವೈಯಕ್ತಿಕ ವಿಷಯವಾಗಿದ್ದು, ಇದನ್ನು ಬಹಿರಂಗಪಡಿಸಿ ತೇಜೋವಧೆ ಮಾಡುವುದು ಎಷ್ಟು ಸರಿ ಎಂಬ ಟೀಕೆಗಳೂ ಸಹ ವ್ಯಕ್ತವಾಗಿವೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular