HomeLive NewsSHOCKING : ಅಯ್ಯೋ ದೇವ್ರೇ.! ಗರ್ಭಿಣಿ ಪತ್ನಿಯನ್ನೇ ಕೊಂದು ದರೋಡೆ ಕಥೆ ಕಟ್ಟಿದ ಪಾಪಿ ಪತಿ.!

SHOCKING : ಅಯ್ಯೋ ದೇವ್ರೇ.! ಗರ್ಭಿಣಿ ಪತ್ನಿಯನ್ನೇ ಕೊಂದು ದರೋಡೆ ಕಥೆ ಕಟ್ಟಿದ ಪಾಪಿ ಪತಿ.!

ಝಜ್ಜರ್ (ಹರಿಯಾಣ): ಪ್ರೀತಿಯ ಸಂಕೇತವಾದ ಪ್ರೇಮಿಗಳ ದಿನವನ್ನು ಒಟ್ಟಾಗಿ ಆಚರಿಸಿ, ಕೆಲವೇ ಗಂಟೆಗಳಲ್ಲಿ ತನ್ನ ಒಡಲಲ್ಲಿ ಎರಡು ತಿಂಗಳ ಮಗುವನ್ನು ಹೊತ್ತಿದ್ದ ಪತ್ನಿಯನ್ನೇ ಪತಿಯೊಬ್ಬ ಬಲಿ ಪಡೆದ ಆಘಾತಕಾರಿ ಘಟನೆ ಹರಿಯಾಣದಲ್ಲಿ ನಡೆದಿದೆ.

ಅನುಮಾನದ ಕಿಚ್ಚಿಗೆ ಗರ್ಭಿಣಿ ಪತ್ನಿಯನ್ನು  ಅಮಾನುಷವಾಗಿ ಹತ್ಯೆ ಮಾಡಿದ ಚಾರ್ಟರ್ಡ್ ಅಕೌಂಟೆಂಟ್ ಅನ್ಶುಲ್ ಧವನ್, ತನ್ನ ಕೃತ್ಯವನ್ನು ಮುಚ್ಚಿಹಾಕಲು ‘ದರೋಡೆಕೋರರ ಹಲ್ಲೆ’ ಎಂಬ ಸಿನಿಮೀಯ ಕಥೆ ಸೃಷ್ಟಿಸಿದ್ದ. ಆದರೆ, ಹಂತಕ ಪತಿ ಹೆಣೆದಿದ್ದ ಸುಳ್ಳಿನ ಬಲೆಗೆ ಆತನೇ ಸಿಕ್ಕಿ ಬಿದ್ದಿದ್ದಾನೆ. ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯ ಜೀವನ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. 31 ವರ್ಷದ ಚಾರ್ಟರ್ಡ್ ಅಕೌಂಟೆಂಟ್ (CA) ಒಬ್ಬ ತನ್ನ ಎರಡು ತಿಂಗಳ ಗರ್ಭಿಣಿ ಪತ್ನಿಯನ್ನೇ ಕೊಲೆ ಮಾಡಿ, ಅದನ್ನು ದರೋಡೆ ಎಂದು ಬಿಂಬಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.

ಏನಿದು ಘಟನೆ
ಆರೋಪಿ ಅನ್ಶುಲ್ ಧವನ್ ಮತ್ತು ಬ್ಯಾಂಕ್ ಉದ್ಯೋಗಿಯಾಗಿದ್ದ ಮೆಹಕ್ ಧವನ್ (27) ಕಳೆದ ವರ್ಷ ಸೆಪ್ಟೆಂಬರ್ 25 ರಂದು ವಿವಾಹವಾಗಿದ್ದರು. ಭಾನುವಾರ ಸಂಜೆ ಹನ್ಸಿಯಿಂದ ಗುರುಗ್ರಾಮಕ್ಕೆ ಕಾರಿನಲ್ಲಿ ಮರಳುತ್ತಿದ್ದಾಗ, ಬದ್ಲಿ ಗ್ರಾಮದ ಸಮೀಪ ಅನ್ಶುಲ್ ಈ ಕೃತ್ಯ ಎಸಗಿದ್ದಾನೆ. ವಿಶೇಷವೆಂದರೆ, ಈ ದಾರುಣ ಕೃತ್ಯಕ್ಕೂ ಮುನ್ನ ದಂಪತಿಗಳು ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನ) ಆಚರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದರೋಡೆ ಕಥೆ ಸೃಷ್ಟಿಸಿದ್ದ ಆರೋಪಿ
ಕೊಲೆಯ ನಂತರ ಅನ್ಶುಲ್ ತಾನೇ ಪೊಲೀಸರಿಗೆ ಕರೆ ಮಾಡಿ, “ನಮ್ಮ ಕಾರನ್ನು ಅಡ್ಡಗಟ್ಟಿದ ಅಪರಿಚಿತ ವ್ಯಕ್ತಿಗಳು ನನ್ನ ಪತ್ನಿಯನ್ನು ಕೊಂದು ಕಾರಿನೊಂದಿಗೆ ಪರಾರಿಯಾಗಿದ್ದಾರೆ” ಎಂದು ಸುಳ್ಳು ದೂರು ನೀಡಿದ್ದ. ಮೆಹಕ್ ಅವರ ಮೃತದೇಹ ಕಾಲುವೆಯೊಂದರ ಬಳಿ ಪತ್ತೆಯಾಗಿತ್ತು.ಅನ್ಶುಲ್ ನೀಡಿದ ಹೇಳಿಕೆಗಳಲ್ಲಿ ಗೊಂದಲವಿದ್ದಿದ್ದನ್ನು ಗಮನಿಸಿದ ಪೊಲೀಸರು, ತೀವ್ರ ವಿಚಾರಣೆ ನಡೆಸಿದಾಗ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಈ ಕೊಲೆಯನ್ನು ಅನ್ಶುಲ್ ಮೊದಲೇ ಯೋಜಿಸಿದ್ದ. ತನ್ನೊಂದಿಗೆ ಕತ್ತರಿಯನ್ನು ತಂದಿದ್ದ ಆತ, ಮೊದಲು ಪತ್ನಿಯ ಕತ್ತು ಹಿಸುಕಿ ನಂತರ ಕತ್ತರಿಯಿಂದ ಗಂಟಲು ಸೀಳಿ ಕೊಲೆ ಮಾಡಿದ್ದಾನೆ.ಪತ್ನಿಯ ನಡತೆಯ ಮೇಲೆ ಸಂಶಯವಿದ್ದ ಕಾರಣ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಮೆಹಕ್ ತನ್ನ ಬ್ಯಾಂಕ್ ಸಹೋದ್ಯೋಗಿಗಳೊಂದಿಗೆ ಪದೇ ಪದೇ ಫೋನ್ನಲ್ಲಿ ಮಾತನಾಡುತ್ತಿದ್ದುದಕ್ಕೆ ಅನ್ಶುಲ್ ವಿರೋಧ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಮೆಹಕ್ ಅವರ ಕುಟುಂಬದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. “ನನ್ನ ಮಗಳಿಗೆ ನ್ಯಾಯ ಸಿಗಬೇಕು ಮತ್ತು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular