HomeLatest NewsSHOCKING: ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಇಸ್ರೋದ ನಿವೃತ್ತ ನೌಕರ: ವಿಚಾರಣೆ ವೇಳೆ ನೀಡಿದ ವಿಚಿತ್ರ ಕಾರಣ

SHOCKING: ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಇಸ್ರೋದ ನಿವೃತ್ತ ನೌಕರ: ವಿಚಾರಣೆ ವೇಳೆ ನೀಡಿದ ವಿಚಿತ್ರ ಕಾರಣ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯವಾಗುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇಸ್ರೋ ಸಂಸ್ಥೆ ನಿವೃತ್ತ ನೌಕರನೊಬ್ಬ ತನ್ನ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಆವಲಹಳ್ಳಿಯ ವಿರ್ಟುಸೊ ಅಪಾರ್ಟ್​ಮೆಂಟ್​​​ನಲ್ಲಿ ಈ ಘಟನೆ ನಡೆದಿದೆ. ಪತ್ನಿ ಸಂಧ್ಯಾ ಮೃತ ಮಹಿಳೆ. ನಾಗಲೇಶ್ವರ ರಾವ್​ ಪತ್ನಿಯನ್ನೇ ಕೊಂದ ಪತಿ. ಆವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಗಲೇಶ್ವರ ರಾವ್​​, ಇಸ್ರೋ ಸಂಸ್ಥೆಯ ನಿವೃತ್ತ ನೌಕರ. ಪತ್ನಿ ಸಂಧ್ಯಾ ಅವರೊಂದಿಗೆ ವಿರ್ಟುಸೊ ಅಪಾರ್ಟ್​ಮೆಂಟ್​​​ನಲ್ಲಿ ನೆಲೆಸಿದ್ದರು. ಪೊಲಿಸರ ವಿಚಾರಣೆವೇಳೆ ನಾನು ಸತ್ತರೆ ಪತ್ನಿಯನ್ನು ಯಾರು ನೋಡುಕೊಳ್ಳುತ್ತಾರೆ? ಯಾರೂ ಸಂಬಂಧಿಕರು ಇಲ್ಲ ಆಕೆಯ ಮುಂದಿನ ಜೀವನ ಹೇಗೆ? ಎಂಬ ಚಿಂತೆಯಾಗಿದೆ. ಹಾಗಾಗಿ ಆಕೆಯನ್ನ ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ನಾಗಲೇಶ್ವರ ರಾವ್, ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ​​ ಇನ್ನು ದಂಪತಿಯ ಓರ್ವ ಮಗಳು ಅಮೆರಿಕದಲ್ಲಿದ್ದಾರೆಂದು ಹೇಳಲಾಗುತ್ತಿದೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular