HomeKarnatakaಕುಡಿಯುವ ನೀರಿಗಾಗಿ ಗಣೇಕಲ್ ಡ್ಯಾಂ ಸುತ್ತ ನಿಷೇಧಾಜ್ಞೆ ಜಾರಿ

ಕುಡಿಯುವ ನೀರಿಗಾಗಿ ಗಣೇಕಲ್ ಡ್ಯಾಂ ಸುತ್ತ ನಿಷೇಧಾಜ್ಞೆ ಜಾರಿ

ಬೇಸಿಗೆ ಆರಂಭವಾಗುತ್ತಿದ್ದು ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಜಿಲ್ಲಾಡಳಿತಗಳು ಕ್ರಮಗಳನ್ನು ಕೈಗೊಳ್ಳುತ್ತಿವೆ. ರಾಯಚೂರು ಜಿಲ್ಲಾಡಳಿತ ಸಹ ಗಣೇಕಲ್ ಜಲಾಶಯದ ಸುತ್ತ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದೆ.

ಜಿಲ್ಲಾದಂಡಾಧಿಕಾರಿಗಳು, ರಾಯಚೂರು ಇವರ ನಡುವಳಿಗಳ ಪ್ರಕಾರ ಗಣೇಕಲ್ ಜಲಾಶಯದಿಂದ ರಾಂಪೂರ ಕುಡಿಯುವ ನೀರಿನ ಜಲಾಶಯಕ್ಕೆ ನೀರನ್ನು ಹರಿಸುವ ವಿತರಣಾ ಕಾಲುವೆ 95, 96, 98, 98ಎ, 98ಬಿ, 99ಎ, 99, ಮತ್ತು 100ರ ವರೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಆಯುಕ್ತರು, ಮಹಾನಗರ ಪಾಲಿಕೆ, ರಾಯಚೂರು ಇವರ ಪತ್ರದ ಅನ್ವಯ ಈ ಕುರಿತು ಆದೇಶಿಸಲಾಗಿದೆ. ರಾಂಪೂರು ಮುಖ್ಯ ಜಲಾಶಯದಲ್ಲಿ ಪ್ರಸ್ತುತ 1.90 ಮೀಟರ್ ಮಟ್ಟದ ನೀರನ ಸಂಗ್ರಹವಿದ್ದು, ರಾಂಪೂರ ಕುಡಿಯುವ ನೀರಿನ ಅವಲಂಬಿತರಾಗಿರುವ ಪ್ರದೇಶಗಳಿಗೆ ದಿನ ಬಿಟ್ಟು ದಿನಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಂದಿನ ದಿನಗಳಗಲ್ಲಿ ನಗರಕ್ಕೆ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವುದು ಅಸಾಧ್ಯವಾಗುವ ಸಾಧ್ಯತೆ ಇದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಲಭ್ಯವಿರುವ ಗಣೇಕಲ್ ಸಮತೋಲನಾ ಜಲಾಶಯದಿಂದ ರಾಂಪೂರ ಜಲಾಶಯಕ್ಕೆ ಕನಿಷ್ಠ 4.50 ಮೀಟರ್ ಮಟ್ಟದ ನೀರು ಸಂಗ್ರಹಿಸುವ ಅಗತ್ಯವಿದೆ.

ಸದರಿ ಕಾಲುವೆ ಮಾರ್ಗದಲ್ಲಿ ವಿತರಣಾ ಕಾಲುವೆ 95, 96, 98, 98ಎ, 98ಬಿ, 99ಎ, 99 ಮತ್ತು 100 ವ್ಯಾಪ್ತಿಯಲ್ಲಿರುವ ಸುಮಾರು 100 ಮೀಟರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ ನೀರಿನ ಹರಿವು ನಿಂತರವಾಗಿ ನಡೆಯುವಂತೆ ಕ್ರಮ ಕೈಗೊಳ್ಳಲು ದಿನಾಂಕ 15-02-2026 ರಿಂದ 21-02-2026 ರವರೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರನ್ವಯ ನಿಷೇಧಾಜ್ಞೆಯನ್ನು ದಿನಾಂಕ 15-02-2026 ರಿಂದ 21-02-2026 ರವರೆಗೆ ಜಾರಿಗೊಳಿಸಲು ಪತ್ರದ ಮೂಲಕ ಆಯುಕ್ತರು, ಮಹಾನಗರ ಪಾಲಿಕೆ, ರಾಯಚೂರು ಇವರು ಕೋರಿದ್ದರು.

ದಿನಾಂಕ 17-02-2026 ರಂದು ಮಧ್ಯರಾತ್ರಿ 12 ಗಂಟೆಯಿಂದ ದಿನಾಂಕ 21-02-2026 ಮಧ್ಯರಾತ್ರಿ 12 ಗಂಟೆಯವರೆಗೆ ವಿತರಣಾ ಕಾಲುವೆ 95, 96, 98, 98ಎ, 98ಬಿ, 99ಎ, 99, ಮತ್ತು 100ರ ವರೆಗೆ ಕಾಲುವೆಯ ಸುತ್ತಮುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿ 100 ಮೀಟರ್ ಸುತ್ತುವರೆದ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸುವುದು ಸೂಕ್ತವೆಂದು ಕಂಡು ಬಂದಿದ್ದು, ಈ ಆದೇಶ ಹೊರಡಿಸಲಾಗಿದೆ.

ಆದೇಶದ ವಿವರ: ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಆಧರಿಸಿ ನಿತೀಶ್.ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ರಾಯಚೂರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರನ್ವಯ ಸದರಿ ವಿತರಣಾ ಕಾಲುವೆ ಸಂಖ್ಯೆ: 95, 96, 98, 98ಎ, 98ಬಿ, 99ಎ 99 ಮತ್ತು 100ರ ವರೆಗೆ ಕಾಲುವೆಯ ಸುತ್ತಮುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ದಿನಾಂಕ 17-02-2026 ರಂದು ಮಧ್ಯರಾತ್ರಿ 12 ಗಂಟೆಯಿಂದ ದಿನಾಂಕ 21-02-2026 ಮಧ್ಯರಾತ್ರಿ 12 ಗಂಟೆಯವರೆಗೆ 100 ಮೀಟರ್ ವಿತರಣಾ ಕಾಲುವೆಗಳ ಸುತ್ತುವರೆದ ಪ್ರದೇಶದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular