ಬೆಂಗಳೂರು: ಬೆಂಗಳೂರಿನಲ್ಲಿ ಸ್ವಂತ ಮಗನಿಗೆ ಪಾಪಿ ತಂದೆ ವಿಷವುಣಿಸಿದ್ದಾನೆ. ಬುದ್ಧಿಮಾಂದ್ಯ ಮಗುವಿಗೆ ಚಿಕಿತ್ಸೆಗೆ ಹಣವಿಲ್ಲ ಎಂದು ವಿಷ ಹಾಕಿದ್ದಾನೆ.
ಬಾಗಲೂರು ನಿವಾಸಿ ಮುನಿಕೃಷ್ಣ ಎಂಬಾತ ಇಂತಹ ಕೃತ್ಯವೆಸಗಿದ ಆರೋಪಿ. ಡಿಸೆಂಬರ್ 22ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸತ್ಯಾ ಮತ್ತು ಮುನಿಕೃಷ್ಣ ದಂಪತಿಗೆ ಎರಡೂವರೆ ವರ್ಷದ ಗಂಡು ಮಗು ಇದೆ. ಮಗು ಜೋಯಲ್ ಗೆ ಹುಟ್ಟಿನಿಂದಲೂ ಆರೋಗ್ಯ ಸಮಸ್ಯೆ ಇತ್ತು. ಹೀಗಾಗಿ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗಳಿಗೆ ಓಡಾಟ ನಡೆಸುತ್ತಿದ್ದರು. ಮಗುವಿಗೆ ಆಹಾರ ನೀಡಲು ಹಾಕಿದ್ದ ಪೈಪ್ ಗೆ ಮುನಿಕೃಷ್ಣ ವಿಷ ಹಾಕಿದ್ದ. ಮಗುವಿನ ಬಾಯಲ್ಲಿ ನೊರೆ ಕಂಡು ತಾಯಿ, ಅಜ್ಜಿ ಗಾಬರಿಯಾಗಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಮುನಿಕೃಷ್ಣ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದಾರೆ. ಪತಿಗೆ ಶಿಕ್ಷೆಯಾಗಬೇಕು ಎಂದು ಸತ್ಯಾ ಹೇಳಿದ್ದಾರೆ.

