ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಪೋಟಗೊಂಡು ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಸಿ ಟೌನ್ ನಲ್ಲಿ ನಡೆದಿದೆ.
ಲೂಥ್ ನಾಥನ್(62) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಬೈಕ್ ಚಾರ್ಜ್ ಗೆ ಹಾಕಿ ಲೂಥ್ ನಾದನ್ ಹಾಲ್ ನಲ್ಲಿ ಮಲಗಿದ್ದ ವೇಳೆ ಏಕಾಏಕಿ ಬೈಕ್ ನ ಬ್ಯಾಟರಿ ಸ್ಪೋಟಗೊಂಡಿದೆ. ಇದರಿಂದಾಗಿ ಲೂಸ್ ನಾಧನ್ ಮೃತಪಟ್ಟಿದ್ದಾರೆ.
ಅವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಮನೆಯ ನೆಲಮಹಡಿಯಲ್ಲಿ ಒಬ್ಬರೇ ಮಲಗಿದ್ದರು. ಮೊದಲ ಮಹಡಿಯಲ್ಲಿ ಮಕ್ಕಳು ವಾಸವಾಗಿದ್ದರು. ಎಲೆಕ್ಟ್ರಿಕ್ ಬೈಕ್ ಚಾರ್ಜ್ ಗೆ ಹಾಕಿ ಸಮೀಪದಲ್ಲಿ ಲೂಥ್ ನಾಥನ್ ಮಲಗಿದ್ದರು. ಬ್ಯಾಟರಿ ಸ್ಪೋಟಗೊಂಡು ಮನೆಗೆ ಬೆಂಕಿ ತಗುಲಿ ಹಾನಿಯಾಗಿದೆ. ಲೂಥ್ ನಾಥನ್ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಲಸೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

