ಚಾಮರಾಜನಗರ: ಗ್ರೈಂಡರ್ ನಿಂದ ವಿದ್ಯುತ್ ಹರಿದು 4 ವರ್ಷದ ಹೆಣ್ಣು ಮಗು ಸಾವನ್ನಪ್ಪಿದ ಘಟನೆ ಬಂಡೀಪುರದ ಕಾಡಂಚಿನ ಗ್ರಾಮ ಕಲೀಗೌಡನಹಳ್ಳಿಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಲೀಗೌಡನಹಳ್ಳಿಯ ಪುಟ್ಟಮ್ಮ ಮತ್ತು ಆನಂದ ದಂಪತಿಯ ಹೆಣ್ಣು ಮಗು ಅದ್ವಿತಾ ಮೃತಪಟ್ಟಿದೆ. ತಂದೆ, ತಾಯಿ ಎದುರೇ ವಿದ್ಯುತ್ ಶಾಕ್ ನಿಂದ ಮಗು ಸಾವನ್ನಪ್ಪಿದೆ. ಮಗುವಿನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

