HomeKarnatakaಸಂಚಾರ ನಿಯಮ ಉಲ್ಲಂಘನೆ: ಕಾರು ಮಾಲೀಕನಿಗೆ ಎರಡು ಮಾರು ಉದ್ದ ಬಿಲ್ ನೀಡಿದ ಪೊಲೀಸರು; ಅವಾಕ್ಕಾದ...

ಸಂಚಾರ ನಿಯಮ ಉಲ್ಲಂಘನೆ: ಕಾರು ಮಾಲೀಕನಿಗೆ ಎರಡು ಮಾರು ಉದ್ದ ಬಿಲ್ ನೀಡಿದ ಪೊಲೀಸರು; ಅವಾಕ್ಕಾದ ಚಾಲಕ

ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರ ವಿರುದ್ಧ ಶಿವಮೊಗ್ಗ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಇಲ್ಲೋರ್ವ ವ್ಯಕ್ತಿಗೆ 2 ಮಾರು ಉದ್ದದ ಬಿಲ್ ನ್ನು ಸಂಚಾರಿ ಪೊಲೀಸರು ನೀಡಿದ್ದಾರೆ. ಜೊತೆಗೆ ಭಾರಿ ದಂಡವನ್ನೂ ವಸೂಲಿ ಮಾಡಿದ್ದಾರೆ.

ಕಾರು ಮಾಲೀಕರೊಬ್ಬರಿಗೆ ಬರೋಬ್ಬರಿ 11 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ದಂಡದ ರಶೀದಿಯೇ ಹೆಚ್ಚುಕಮ್ಮಿ ಎರಡು ಮಾರು ಉದ್ದವಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.

ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪಿಎಸ್ ಐ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರೊಂದರ ದಾಖಲೆ ಪರಿಶೀಲನೆ ನಡೆಸಿದಾಗ ಕಾರಿನ ಮೇಲೆ ಹಲವು ದಂಡಗಳು ಇರುವುದು ಗೊತ್ತಾಗಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ ದಂಡದ ಮೊತ್ತವೇ ಬರೋಬ್ಬರಿ 11 ಸಾವಿರ ರೂಪಾಯಿ. ಹೀಗಾಗಿ ವಾಹನ ಮಾಲೀಕನಿಂದ ಪೂರ್ಣ ದಂಡದ ಮೊತ್ತವನ್ನು ಕಟ್ಟಿಸಿಕೊಂಡು ಅವರಿಗೆ ಮಾರುದ್ದದ ರಶೀದಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular