HomeLatest NewsBREAKING : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿತ.!

BREAKING : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿತ.!

ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ವೃದ್ಧೆಯೊಬ್ಬರನ್ನು ಮನೆಯಂಗಳದಲ್ಲಿ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ವೃದ್ಧೆ ಎಂಬುದನ್ನೂ ನೋಡದೇ ಮನುಷತ್ವ, ಮಾನವೀಯತೆಯನ್ನು ಮರೆತು ನೆರೆಮನೆಯವರು ವರ್ತಿಸಿದ್ದಾರೆ. ವೃದ್ಧೆ ಕೂಗಾಡುತ್ತಿದ್ದರೂ ಕರುಣೆ ತೋರಿಲ್ಲ. ಶಿವಮೊಗ್ಗದ ಸಾಗರದಲ್ಲಿ ಈ ಘಟನೆ ನಡೆದಿದೆ.

ಕಸ ಹಾಕುವ ವಿಚಾರವಾಗಿ ಅಪ್ಪ-ಪಕ್ಕದ ಮನೆಯವರಿಗೆ ಜಗಳವಾಗಿದೆ. ವೃದ್ಧೆಯ ಜೊತೆ ಗಲಾಟೆ ಮಾಡಿದ ಪಕ್ಕದ ಮನೆಯವರು ಅವರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಲ್ಲೆ ನಡೆಸಿರುವ ಪ್ರೇಮಾ, ದರ್ಶನ್ ಹಾಗೂ ಮಂಜುನಾಥ್ ಎಂಬ ಮೂವರ ವಿರುದ್ಧ ಸಾಗರದ ಅನಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular