ಹುಬ್ಬಳ್ಳಿ : ಯುವಕನೋರ್ವ ಪ್ರಾಧ್ಯಾಪಕಿಗೆ ಅಶ್ಲೀಲ ವೀಡಿಯೋ ಹಾಗೂ ಫೋಟೋ ತೋರಿಸಿ ಬ್ಲಾಕ್ಮೇಲ್ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಶಶಿ (25) ಎಂಬ ಯುವಕ ಪ್ರಾಧ್ಯಾಪಕಿಯ ಅಶ್ಲೀಲ ವೀಡಿಯೋ ರೆಕಾರ್ಡ್ ಮಾಡಿಕೊಂಡು ಮದುವೆ ಆಗುವಂತೆ ಪೀಡಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೇ ಅಶ್ಲೀಲ ವೀಡಿಯೋಗಳನ್ನ ಪ್ರಾಧ್ಯಾಪಕಿ ಸಹೋದನಿಗೂ ಕಳುಹಿಸಿದ್ದಾನೆ.
ಸದ್ಯ ಪ್ರಾಧ್ಯಾಪಕಿ ಪೊಲೀಸರಿಗೆ ದೂರು ನೀಡಿದ್ದು , ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶಶಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

