HomeIndiaಶಂಕರಾಚಾರ್ಯ ಅವಿಮುಕ್ತೇಶ್ವರಾನಂದ v/s ಯೋಗಿ ಆದಿತ್ಯನಾಥ್: ಅಯೋಧ್ಯೆ ಅಧಿಕಾರಿ ರಾಜೀನಾಮೆ!

ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ v/s ಯೋಗಿ ಆದಿತ್ಯನಾಥ್: ಅಯೋಧ್ಯೆ ಅಧಿಕಾರಿ ರಾಜೀನಾಮೆ!

ಉತ್ತರ ಪ್ರದೇಶ ರಾಜ್ಯ ಸುದ್ದಿಯಲ್ಲಿದೆ. ಕಾರಣ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ v/s ಯೋಗಿ ಆದಿತ್ಯನಾಥ್. ಹೌದು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಾಘಮೇಳದಲ್ಲಿ ಶಂಕರಾಚಾರ್ಯ ಪಟ್ಟದ ಸುತ್ತ ನಡೆಯುತ್ತಿರುವ ವಿವಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ನಡುವಿನ ಜಟಾಪಟಿಗೆ ಕಾರಣವಾಗಿದೆ.

 ಈಗ ಅಧಿಕಾರಿಯೊಬ್ಬರ ರಾಜೀನಾಮೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸ್ವಾಮಿ ಮತ್ತು ಯೋಗಿ ಆದಿತ್ಯನಾಥ್ ನಡುವಿನ ವಿವಾದ ತೀವ್ರ ಸ್ವರೂಪವನ್ನು ಬಯಲು ಮಾಡಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ, ಪ್ರಧಾನಮಂತ್ರಿ ಮತ್ತು ಸಂವಿಧಾನಕ್ಕೆ ಬೆಂಬಲ ಸೂಚಿಸಿ ಅಯೋಧ್ಯೆಯ ಅಧಿಕಾರಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ.

ಮಂಗಳವಾರ ಅಯೋಧ್ಯೆಯ ಜಿಎಸ್‌ಟಿ ಉಪ ಆಯುಕ್ತ ಪ್ರಶಾಂತ್ ಕುಮಾರ್ ಸಿಂಗ್ “ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ ಮತ್ತು ಇತರರಿಗೆ ಉಂಟಾದ ಅಪಮಾನವನ್ನು ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಸರ್ಕಾರ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಗೃಹ ಸಚಿವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬೆಂಬಲವಾಗಿ ಹಾಗೂ ಸರ್ಕಾರಿ ನೌಕರರ ನಿಯಮಾವಳಿಗಳಿಗೆ ಅನುಗುಣವಾಗಿ ನಾನು ರಾಜೀನಾಮೆ ನೀಡಿದ್ದೇನೆ. ಸಮಾಜವನ್ನು ವಿಭಜಿಸುವ ಉದ್ದೇಶ ಹೊಂದಿರುವ ಅವಿಮುಕ್ತೇಶ್ವರಾನಂದರ ಅನಿಯಂತ್ರಿತ ಹೇಳಿಕೆಗಳಿಂದ ನನಗೆ ನೋವಾಗಿದೆ” ಎಂದು ತಿಳಿಸಿದ್ದಾರೆ.

“ಈ ಸರ್ಕಾರವು ನನ್ನ ಅನ್ನದಾತ. ನಾನು ಇದರ ಋಣದಲ್ಲಿದ್ದೇನೆ ಕೇವಲ ರೋಬೋಟ್‌ನಂತೆ ಸಂಬಳ ಪಡೆಯುತ್ತಾ ಇರುವುದು ನನ್ನ ಕರ್ತವ್ಯವಲ್ಲ. ಯೋಗಿ ಆದಿತ್ಯನಾಥ್ ಅವರು ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಮುಖ್ಯಮಂತ್ರಿ ಮತ್ತು ಈ ಅವಮಾನವನ್ನು ಸಹಿಸಲು ನನಗೆ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

“ಯುಜಿಸಿ ವಿಷಯದ ಬಗ್ಗೆ ನಡೆಯುತ್ತಿರುವ ರಾಜಕೀಯದಿಂದ ತನಗೆ ನೋವಾಗಿದೆ ಮತ್ತು ರಾಜೀನಾಮೆ ಅಂಗೀಕಾರವಾದ ನಂತರ ಸಮಾಜ ಸೇವೆಯನ್ನು ಪ್ರಾರಂಭಿಸುತ್ತೇನೆ” ಎಂದು ಅವರು ಘೋಷಣೆ ಮಾಡಿದ್ದಾರೆ.

ಇದರ ಪ್ರಾರಂಭದ, ಮಾಘಮೇಳ: ಜನವರಿ ತಿಂಗಳ ಆರಂಭದಲ್ಲಿ ಮಾಘಮೇಳದ ಸಂದರ್ಭದಲ್ಲಿ ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡದಂತೆ ತಮ್ಮನ್ನು ಮತ್ತು ತಮ್ಮ ಬೆಂಬಲಿಗರನ್ನು ತಡೆಯಲಾಗಿತ್ತು ಎಂದು ಶಂಕರಾಚಾರ್ಯರು ಆರೋಪಿಸಿದ್ದರು.

ಈಗ ನಡೆಯುತ್ತಿರುವ ವಿವಾದದ ಪ್ರಾರಂಭ ಆಗಲೇ ಆಗಿದೆ. ಆದರೆ ಆಗ ಆಡಳಿತ ಮಂಡಳಿ ಈ ನಡೆಯನ್ನು ಸಮರ್ಥನೆ ಮಾಡಿಕೊಂಡಿತ್ತು ಮತ್ತು ಕಿಕ್ಕಿರಿದು ಭಕ್ತರು ಸೇರಿದ್ದ ಪ್ರದೇಶದಲ್ಲಿ ಕಾಲ್ತುಳಿತ ಸಂಭವಿಸುವುದನ್ನು ತಪ್ಪಿಸಲು ಅವರ ರಥಯಾತ್ರೆಯನ್ನು ತಡೆಯಲಾಗಿತ್ತು. ಇತರ ಭಕ್ತರಂತೆ ಕಾಲ್ನಡಿಗೆಯಲ್ಲಿ ತೆರಳುವಂತೆ ಮನವಿ ಮಾಡಲಾಗಿತ್ತು ಎಂದು ಹೇಳಿತ್ತು.

ತಮ್ಮನ್ನು ಕಾಲ್ನಡಿಗೆಯಲ್ಲಿ ಸಾಗಲು ಹೇಳಿದ್ದು ಅಪಮಾನ ಎಂದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸ್ವಾಮಿ ಹೇಳಿದ್ದರು. ಇದರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಘಟನೆ ಬಳಿಕ ಯೋಗಿ ಆದಿತ್ಯನಾಥ್ ಮತ್ತು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸ್ವಾಮಿ ನಡುವೆ ವಾಕ್ಸಮರ ನಡೆದಿತ್ತು. ಮುಖ್ಯಮಂತ್ರಿಗಳು ಮಾತನಾಡಿ ಶಂಕರಾಚಾರ್ಯರ ಹೆಸರು ಉಲ್ಲೇಖಿಸದೆ, ಕಾಲನೇಮಿ ಬಗ್ಗೆ ಜನರು ಎಚ್ಚರದಿಂದಿರಬೇಕು ಎಂದು ಎಚ್ಚರಿಸಿದ್ದರು. (ಕಾಲನೇಮಿ ಎಂದರೆ ರಾಮಾಯಣದಲ್ಲಿ ಹನುಮಂತನನ್ನು ವಂಚಿಸಲು ಸಾಧುವಿನ ವೇಷ ಧರಿಸಿದ್ದ ರಾಕ್ಷಸನ ಹೆಸರು)

ಆಗ ಶಂಕರಾಚಾರ್ಯರು ತಿರುಗೇಟು ನೀಡಿ, “ಯೋಗಿ ಆದಿತ್ಯನಾಥ್ ಈಗ ಒಬ್ಬ ರಾಜಕಾರಣಿ, ಅವರು ಧರ್ಮದ ವಿಷಯಗಳನ್ನು ನಮ್ಮಂತಹ ಸಂತರಿಗೆ ಬಿಡಬೇಕು. ಮುಖ್ಯಮಂತ್ರಿಗಳು ಒಬ್ಬ ರಾಜಕಾರಣಿ. ಅವರು ಶಿಕ್ಷಣ, ಆರೋಗ್ಯ, ಕಾನೂನು ಸುವ್ಯವಸ್ಥೆ ಅಥವಾ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಅವರು ಕಾಲನೇಮಿ, ಧರ್ಮ ಮತ್ತು ಅಧರ್ಮದ ಬಗ್ಗೆ ಮಾತನಾಡುತ್ತಾರೆ. ಇದು ಎಷ್ಟು ಸಮಂಜಸ?. ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸಬೇಕು. ಧರ್ಮದ ವಿಷಯವನ್ನು ಧಾರ್ಮಿಕ ಮುಖಂಡರಿಗೆ ಬಿಡಬೇಕು” ಎಂದು ಟೀಕಿಸಿದ್ದರು.

ಯುಜಿಸಿ ಹೊಸ ನಿಯಮಗಳ ಕುರಿತು ಪ್ರತಿಕ್ರಿಯಿಸಿದ್ದ ಸ್ವಾಮಿಗಳು, “ಯಾವ ಜಾತಿಯೂ ಸಹಜವಾಗಿಯೇ ಅನ್ಯಾಯ ಮಾಡುವುದಿಲ್ಲ. ಅನ್ಯಾಯ ಎಸಗುವವರು ವ್ಯಕ್ತಿಗಳು. ಪ್ರತಿಯೊಂದು ಜಾತಿಯಲ್ಲೂ ಒಳ್ಳೆಯವರು ಮತ್ತು ಕೆಟ್ಟವರು ಇರುತ್ತಾರೆ. ಒಬ್ಬ ವ್ಯಕ್ತಿಯು ಅನ್ಯಾಯ ಮಾಡಿರಬಹುದು, ಆದರೆ ಇಡೀ ಜಾತಿಯನ್ನು ನ್ಯಾಯಯುತ ಅಥವಾ ಅನ್ಯಾಯಯುತ ಎಂದು ಗುರುತಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular