HomeLatest NewsBREAKING : ಅಮೆರಿಕದಲ್ಲಿ ಭೀಕರ ಹಿಮ ಬಿರುಗಾಳಿ : 25 ಜನ ಸಾವು !

BREAKING : ಅಮೆರಿಕದಲ್ಲಿ ಭೀಕರ ಹಿಮ ಬಿರುಗಾಳಿ : 25 ಜನ ಸಾವು !

ಅಮೆರಿಕದಾದ್ಯಂತ ಬೀಸುತ್ತಿರುವ ಭೀಕರ ಹಿಮಬಿರುಗಾಳಿ (Winter Storm) ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ನೈಸರ್ಗಿಕ ವಿಕೋಪಕ್ಕೆ ಜನರು ತತ್ತರಗೊಂಡಿದ್ದು, ಸಾವಿರಾರು ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ಅಲ್ಲದೇ ಭೀಕರ ಹಿಮಬಿರುಗಾಳಿಗೆ 25 ಜನರು ಮೃತಪಟ್ಟಿದ್ದಾರೆ.

ಹೌದು. ಹಿಮಪಾತ ಮತ್ತು ಮೈಕೊರೆಯುವ ಚಳಿಗೆ ಇದುವರೆಗೆ ಸುಮಾರು 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಟೆಕ್ಸಾಸ್, ಲೂಯಿಸಿಯಾನ ಮತ್ತು ನ್ಯೂಯಾರ್ಕ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾವುಗಳು ಸಂಭವಿಸಿವೆ.
ಭಾರಿ ಹಿಮಪಾತ ಮತ್ತು ಬಿರುಗಾಳಿಯಿಂದಾಗಿ ವಿದ್ಯುತ್ ತಂತಿಗಳು ತುಂಡಾಗಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಗ್ರಾಹಕರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಟೆನ್ನೆಸ್ಸಿ, ಮಿಸ್ಸಿಸ್ಸಿಪ್ಪಿ ಮತ್ತು ಜಾರ್ಜಿಯಾ ರಾಜ್ಯಗಳು ಹೆಚ್ಚು ಬಾಧಿತವಾಗಿವೆ.

ವಿಮಾನ ಯಾನ ರದ್ದು: ಹವಾಮಾನ ವೈಪರೀತ್ಯದಿಂದಾಗಿ ಸುಮಾರು 30,000ಕ್ಕೂ ಹೆಚ್ಚು ವಿಮಾನ ಪ್ರಯಾಣದ ಮೇಲೆ ಪರಿಣಾಮ ಬೀರಿದ್ದು, ಸಾವಿರಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಸ್ತೆ ಸಂಚಾರಕ್ಕೆ ಅಡ್ಡಿ: ರಸ್ತೆಗಳ ಮೇಲೆ ಹಿಮದ ಪದರ ಶೇಖರಣೆಗೊಂಡಿರುವುದರಿಂದ ವಾಹನ ಸವಾರರಿಗೆ ಸಂಚರಿಸುವುದು ಅಪಾಯಕಾರಿಯಾಗಿದೆ. ನೂರಾರು ಅಪಘಾತಗಳು ವರದಿಯಾಗಿದ್ದು, ತುರ್ತು ಪರಿಸ್ಥಿತಿ ಹೊರತುಪಡಿಸಿ ಜನರು ಮನೆಯಿಂದ ಹೊರಬರದಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳ ರಜೆ: ನ್ಯೂಯಾರ್ಕ್, ಬೋಸ್ಟನ್ ಮತ್ತು ಫಿಲಡೆಲ್ಫಿಯಾದಂತಹ ಪ್ರಮುಖ ನಗರಗಳಲ್ಲಿ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದ್ದು, ಆನ್ಲೈನ್ ತರಗತಿಗಳಿಗೆ ಸೂಚಿಸಲಾಗಿದೆ.

ಪರಿಸ್ಥಿತಿಯನ್ನು ಎದುರಿಸಲು ಅಮೆರಿಕ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಂಡಿದ್ದು, ಪೀಡಿತ ಪ್ರದೇಶಗಳಲ್ಲಿ ‘ವಾರ್ಮಿಂಗ್ ಸೆಂಟರ್’ಗಳನ್ನು (ಉಷ್ಣಾಂಶ ಕೇಂದ್ರ) ತೆರೆಯಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಕೆಲವು ದಿನಗಳವರೆಗೆ ಚಳಿ ಮತ್ತು ಹಿಮಪಾತ ಮುಂದುವರಿಯುವ ಸಾಧ್ಯತೆಯಿದೆ. ಹಿಮಬಿರುಗಾಳಿಗಳು ಸಾಮಾನ್ಯವಾಗಿ ಉತ್ತರ ಅಮೇರಿಕಾ, ಯುರೋಪ್ ಮತ್ತು ಹಿಮಾಲಯದಂತಹ ಎತ್ತರದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಹಿಮಬಿರುಗಾಳಿಯ ಪ್ರಮುಖ ಲಕ್ಷಣಗಳು

• ಅತಿಯಾದ ಹಿಮಪಾತ: ನಿರಂತರವಾಗಿ ಹಿಮ ಬೀಳುವುದರಿಂದ ರಸ್ತೆಗಳು, ಮನೆಗಳು ಹಿಮದಿಂದ ಆವೃತವಾಗುತ್ತವೆ.
• ಬಲವಾದ ಗಾಳಿ: ಗಾಳಿಯ ವೇಗವು ಹೆಚ್ಚಾಗಿದ್ದು, ಹಿಮವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ದೂಡಿ, ಹಿಮದ ದಿಣ್ಣೆಗಳನ್ನು (Snowdrifts) ಸೃಷ್ಟಿಸುತ್ತದೆ.
• ಕಡಿಮೆ ಗೋಚರತೆ: ಬೀಳುವ ಹಿಮ ಮತ್ತು ಗಾಳಿಯಿಂದಾಗಿ ದೂರದ ವಸ್ತುಗಳು ಕಾಣಿಸದಂತಾಗುತ್ತವೆ (Whiteout conditions).

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular