ಕಾರವಾರ: ಕಾರವಾರದಲ್ಲಿಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು ಎಂದರು.
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದ ಹಣ ಜಮಾ ಮಾಡಲಾಗಿದೆ. ಇನ್ನೂ ಸ್ವಲ್ಪ ಬಾಕಿ ಇದೆ. ಐವರು ಬಿಜೆಪಿ ಶಾಸಕರು ಇದ್ದಾಗ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಘೋಷಣೆ ಮಾಡಿದ್ದು, ಈಗ ಯಾಕೆ ತುಟಿ ಬಿಚ್ಚಿಲ್ಲ. ಮಾಡಿದ ತಪ್ಪನ್ನು ಒಪ್ಪಿಕೊಂಡು ಮುಂದೇನು ಮಾಡಬೇಕು ಎಂಬುದನ್ನು ಹೇಳಲಿ ಎಂದು ತಿಳಿಸಿದ್ದಾರೆ.
ಬೇಡ್ತಿ ಘೋಷಣೆಯಾದಾಗ ಶಿವರಾಮ್ ಹೆಬ್ಬಾರ್ ಸಚಿವರಾಗಿದ್ದರು. ಹಾವೇರಿ ಉಸ್ತುವಾರಿ ಹೊಂದಿದ್ದರು. ಎರಡೂ ಯೋಜನೆಗೆ ನಮ್ಮ ವಿರೋಧ ತಿಳಿಸಿದ್ದೇವೆ ಎಂದರು.

