HomeIndiaಪ್ರಧಾನಿ ಮೋದಿ ಜನ್ಮದಿನ: ಕಾಶಿಯಿಂದ ವಡ್ನಗರಕ್ಕೆ ಸೇವಾ ಸಂಕಲ್ಪ ಬೃಹತ್ ಬೈಕ್ ಯಾತ್ರೆಗೆ ಚಾಲನೆ: ಗಂಗಾಜಲವನ್ನು...

ಪ್ರಧಾನಿ ಮೋದಿ ಜನ್ಮದಿನ: ಕಾಶಿಯಿಂದ ವಡ್ನಗರಕ್ಕೆ ಸೇವಾ ಸಂಕಲ್ಪ ಬೃಹತ್ ಬೈಕ್ ಯಾತ್ರೆಗೆ ಚಾಲನೆ: ಗಂಗಾಜಲವನ್ನು ಹೊತ್ತು ಸಾಗಿದ 500 ಬೈಕರ್ ಗಳು; 40,000 ಕಿ.ಮೀ ಕ್ರಮಿಸುವ ಗುರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಾಗೂ ಅವರ 25 ವರ್ಷಗಳ ಸಂವಿಧಾನಿಕ ಸೇವೆ ನಿಟ್ಟಿನಲ್ಲಿ ಅವರ ಸಂಸದೀಯ ಕ್ಷೇತ್ರ ಕಾಶಿಯಿಂದ ಹುಟ್ಟೂರು ಗುಜರಾತ್ ನ ವಡ್ನಗರದವರೆಗೆ ಬೃಹತ್ ಸೇವಾ ಸಂಕಲ್ಪ ಬೈಕ್ ಯಾತ್ರೆಗೆ ಚಾಲನೆ ನೀಡಲಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಾಶಿಯಲ್ಲಿ ಸೇವಾಂಂಕಲ್ಪ ಬೈಕ್ ಯಾತ್ರೆಗೆ ಚಾಲನೆ ನೀಡಿದರು. ಬೈಕ್ ಯಾತ್ರೆಯಲ್ಲಿ, 500 ಯುವ ಬೈಕರ್‌ಗಳು ಗಂಗಾಜಲವನ್ನು ಹೊತ್ತು ಸಾಗಿದ್ದಾರೆ. 10 ರಾಜ್ಯಗಳ 1,159ಕ್ಕೂ ಹೆಚ್ಚು ಹಳ್ಳಿಗಳ ಮೂಲಕ ಬೈಕ್ ಯತರ್ತೆ ಸಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೇವಾ ಸಂಕಲ್ಪ ಬೈಕ್ ಯಾತ್ರೆಯ ಆರಂಭಕ್ಕೂ ಮುನ್ನ 51 ಬೈಕ್ ಸವಾರರು ಕಾಶಿಯ ಲಲಿತಾ ಘಾಟ್‌ನಲ್ಲಿ ಶಂಖನಾದ ಹಾಗೂ ಡಮರು ವಾದ್ಯಗಳ ಮೂಲಕ ಪವಿತ್ರ ಗಂಗಾಜಲವನ್ನು ಸಂಗ್ರಹಿಸಿದರು. ಬಳಿಕ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಗಂಗಾಜಲದಿಂದ ಮಹಾ ರುದ್ರಾಭಿಷೇಕ ನೆರವೇರಿಸಿ, ಪ್ರಧಾನಿ ಮೋದಿಯವರ ಆಯುರಾರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇಂದಿನಿಂದ ಆರಂಭವಾಗಿರುವ ಬೈಕ್ ಯಾತ್ರೆ ಅಕ್ಟೋಬರ್ 7 ರವರೆಗೆ ನಡೆಯಲಿದೆ. ಈ ಬೈಕ್ ಯಾತ್ರೆಯು ಸುಮಾರು 40,000 ಕಿ.ಮೀ ದೂರವನ್ನು ಕ್ರಮಿಸಲಿದೆ. ಇದು 10 ರಾಜ್ಯಗಳು, 193 ಜಿಲ್ಲೆಗಳು, 773 ತಾಲೂಕುಗಳು ಹಾಗೂ 1159 ಹಳ್ಳಿಗಳ ಮೂಲಕ ಹಾದುಹೋಗಲಿದೆ. ಉತ್ತರ ಪ್ರದೇಶವೊಂದರಲ್ಲೇ 50 ಜಿಲ್ಲೆಗಳನ್ನು ಇದು ಒಳಗೊಂಡಿದೆ.

ಕಾಶಿಯಿಂದ ಹೊರಟ ಯಾತ್ರಿಕರು ಗಂಗಾಜಲವನ್ನು ವಡ್ನಗರದ ಶ್ರೀ ಹಾಟಕೇಶ್ವರ ಮಹಾದೇವ ಮಂದಿರಕ್ಕೆ ಕೊಂಡೊಯ್ಯಲಿದ್ದಾರೆ. ಅತ್ತ ಗುಜರಾತ್‌ನ ವಡ್ನಗರದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಆರಂಭವಾದ ಮತ್ತೊಂದು ಬೈಕ್ ಯಾತ್ರೆಯು ಗುಜರಾತ್‌ನ ನದಿಗಳ ಪವಿತ್ರ ಜಲವನ್ನು ಹೊತ್ತು ಕಾಶಿಗೆ ಬರುತ್ತಿದೆ.

ಈ ವಿಶೇಷ ಸಮಾರಂಭದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಯುಪಿ ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಯುವ ಬೈಕ್ ಸವಾರರ ಮೂಲಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು, ಡಿಜಿಟಲ್ ಕ್ರಾಂತಿ ಮತ್ತು ಮೂಲಸೌಕರ್ಯ ಸಾಧನೆಗಳನ್ನು ಹೊಸ ತಲೆಮಾರಿನ ಮತದಾರರಿಗೆ ತಲುಪಿಸುವುದು ಕೂಡ ಇದರ ಉದ್ದೇಶಗಳಲ್ಲಿ ಒಂದು ಎನ್ನಲಾಗಿದೆ.

ಬೈಕ್ ಸವಾರರು ಹಾದುಹೋಗುವ ಪ್ರತಿ ನಿಲುಗಡೆಯಲ್ಲೂ ಕೇವಲ ರ‍್ಯಾಲಿ ಮಾಡುವುದಷ್ಟೇ ಅಲ್ಲದೆ, ಗಿಡ ನೆಡುವ ಕಾರ್ಯಕ್ರಮ, ಸ್ವಚ್ಛತಾ ಅಭಿಯಾನ, ಕ್ಷಯರೋಗ ಮುಕ್ತ ಭಾರತ ಜಾಗೃತಿ ಮತ್ತು ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮಗಳನ್ನು ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆ.

ಇದೇ ವೇಳೆ ವಾರಾಣಸಿಯ ರುದ್ರಾಕ್ಷ ಸಮಾವೇಶ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ 13 ವರ್ಷ ಹಾಗೂ ದೇಶದ ಪ್ರಧಾನಿಯಾಗಿ 12 ವರ್ಷ ಸೇವೆ ಸಲ್ಲಿಸಿದ ಒಟ್ಟು 25 ವರ್ಷಗಳ ಸಾರ್ವಜನಿಕ ಜೀವನದ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular