HomeAutoಚಿಪ್‌ ತಯಾರಿಕೆಯಷ್ಟೇ ಅಲ್ಲ, ಡಿಸೈನ್‌ನಲ್ಲೂ ಕರ್ನಾಟಕದ ಕಮಾಲ್‌; ಬೆಂಗಳೂರು ಟಾಪ್‌

ಚಿಪ್‌ ತಯಾರಿಕೆಯಷ್ಟೇ ಅಲ್ಲ, ಡಿಸೈನ್‌ನಲ್ಲೂ ಕರ್ನಾಟಕದ ಕಮಾಲ್‌; ಬೆಂಗಳೂರು ಟಾಪ್‌

ಭಾರತದ ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಕರ್ನಾಟಕ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ. ಕೇಂದ್ರ ಸರ್ಕಾರದ ChipIN Centre ಮೂಲಕ ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಸ್ಥೆಗಳಿಗೆ ಬೆಂಬಲ ನೀಡಿರುವ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಕರ್ನಾಟಕದ 81 ಸಂಸ್ಥೆಗಳಿಗೆ ಬೆಂಬಲ ನೀಡಲಾಗಿದ್ದು, 73 ಚಿಪ್‌ ಟೇಪ್‌ಔಟ್‌ಗಳು ಪೂರ್ಣಗೊಂಡಿವೆ.

ಎಲೆಕ್ಟ್ರಾನಿಕ್ ಡಿಸೈನ್ ಆಟೋಮೇಷನ್ (EDA) ಟೂಲ್‌ಗಳ ಬಳಕೆಯಲ್ಲೂ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 88 ಲಕ್ಷ ಗಂಟೆಗಳಷ್ಟು EDA ಟೂಲ್ ಬಳಕೆ ದಾಖಲಾಗಿದೆ.ಈ ಪಟ್ಟಿಯಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು, 79 ಸಂಸ್ಥೆಗಳಿಗೆ ಬೆಂಬಲ ಮತ್ತು 33 ಟೇಪ್‌ಔಟ್‌ಗಳನ್ನು ದಾಖಲಿಸಿದೆ. ತೆಲಂಗಾಣದಲ್ಲಿ 42 ಸಂಸ್ಥೆಗಳು ಮತ್ತು 28 ಟೇಪ್‌ಔಟ್‌ಗಳು ದಾಖಲಾಗಿವೆ.

ಮಹಾರಾಷ್ಟ್ರದಲ್ಲಿ 32 ಸಂಸ್ಥೆಗಳಿಗೆ ಬೆಂಬಲ ನೀಡಲಾಗಿದ್ದು, 24 ಟೇಪ್‌ಔಟ್‌ಗಳು ಮತ್ತು 15 ಲಕ್ಷ ಗಂಟೆಗಳ EDA ಟೂಲ್ ಬಳಕೆ ದಾಖಲಾಗಿದೆ. ಉತ್ತರ ಪ್ರದೇಶದಲ್ಲಿ 24 ಸಂಸ್ಥೆಗಳು ಹಾಗೂ 21 ಟೇಪ್‌ಔಟ್‌ಗಳು, ಮಧ್ಯಪ್ರದೇಶದಲ್ಲಿ 24 ಸಂಸ್ಥೆಗಳು ಮತ್ತು 18 ಟೇಪ್‌ಔಟ್‌ಗಳು ನಡೆದಿವೆ. ಕೇರಳ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಪಂಜಾಬ್ ಕೂಡ ಸಚಿವಾಲಯದ ಟಾಪ್‌ 10 ರಾಜ್ಯಗಳ ಪಟ್ಟಿಯಲ್ಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ChipIN Centre ಎಂದರೇನು?

ChipIN Centre ಎನ್ನುವುದು ಚಿಪ್‌ ವಿನ್ಯಾಸಕ್ಕೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಒದಗಿಸುವ ಕೇಂದ್ರವಾಗಿದೆ. ಇಲ್ಲಿ EDA ಸಾಫ್ಟ್‌ವೇರ್, ಕಂಪ್ಯೂಟರ್ ಹಾಗೂ ಹಾರ್ಡ್‌ವೇರ್ ಸೌಲಭ್ಯ, IP ಕೋರ್‌ಗಳು ಮತ್ತು ತಾಂತ್ರಿಕ ಮಾರ್ಗದರ್ಶನ ಲಭ್ಯವಿದೆ.C2S (Chips to Start-up) ಮತ್ತು DLI (Design Linked Incentive) ಯೋಜನೆಗಳ ಮೂಲಕ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಿಗಳಿಗೆ ಚಿಪ್‌ ವಿನ್ಯಾಸ ಹಾಗೂ ಅಭಿವೃದ್ಧಿಗೆ ಅಗತ್ಯವಾದ ನೆರವು ನೀಡಲಾಗುತ್ತದೆ.

₹1.27 ಲಕ್ಷ ಕೋಟಿ ‘Semicon 2.0’

ಭಾರತದ ಸೆಮಿಕಂಡಕ್ಟರ್‌ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ವೇಗ ನೀಡಲು ಕೇಂದ್ರ ಸಚಿವ ಸಂಪುಟ ಜುಲೈನಲ್ಲಿ ‘Semicon 2.0’ ಯೋಜನೆಗೆ ₹1,27,500 ಕೋಟಿ ಅನುದಾನವನ್ನು ಅನುಮೋದಿಸಿದೆ.

ಚಿಪ್‌ ಡಿಸೈನ್, ಯಂತ್ರೋಪಕರಣ ಮತ್ತು ಕಚ್ಚಾ ವಸ್ತುಗಳು, ಸೆಮಿಕಂಡಕ್ಟರ್ ಫ್ಯಾಬ್‌ಗಳು, ATMP/OSAT, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಾಂತ್ರಿಕ ಪ್ರತಿಭೆ ಅಭಿವೃದ್ಧಿ ಸೇರಿದಂತೆ ಆರು ಪ್ರಮುಖ ಕ್ಷೇತ್ರಗಳ ಮೇಲೆ ಈ ಯೋಜನೆ ಗಮನಹರಿಸಲಿದೆ.

ದೇಶೀಯವಾಗಿ ಚಿಪ್‌ ಉತ್ಪಾದನೆ ಮತ್ತು ವಿನ್ಯಾಸ ಸಾಮರ್ಥ್ಯ ಹೆಚ್ಚಿಸುವ ಮೂಲಕ ಸ್ವಾವಲಂಬಿ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಸೆಮಿಕಂಡಕ್ಟರ್‌ ಉದ್ಯಮ ನಿರ್ಮಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular