HomeEntertainmentಕಾರ್ತಿ ಅಭಿನಯದ 'ಸರ್ದಾರ್ 2' ಕುರಿತು ಆಶಿಕಾ ರಂಗನಾಥ್ ಮಾತು: 'ಫೈಜಾ' ಪಾತ್ರದ ಸಸ್ಪೆನ್ಸ್ ಬಿಚ್ಚಿಟ್ಟ...

ಕಾರ್ತಿ ಅಭಿನಯದ ‘ಸರ್ದಾರ್ 2’ ಕುರಿತು ಆಶಿಕಾ ರಂಗನಾಥ್ ಮಾತು: ‘ಫೈಜಾ’ ಪಾತ್ರದ ಸಸ್ಪೆನ್ಸ್ ಬಿಚ್ಚಿಟ್ಟ ಚುಟು ಚುಟು ಸುಂದರಿ!

ಸ್ಯಾಂಡಲ್‌ವುಡ್ ಬ್ಯೂಟಿ ಆಶಿಕಾ ರಂಗನಾಥ್ ತಮಿಳು ಚಿತ್ರರಂಗದಲ್ಲಿ ಸಕತ್ ಬ್ಯುಸಿಯಾಗಿದ್ದು, ಕೋಲಿವುಡ್ ನಟ ಕಾರ್ತಿ ಅಭಿನಯದ ಬಹುನಿರೀಕ್ಷಿತ ‘ಸರ್ದಾರ್ 2’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ಎಸ್. ಮಿತ್ರನ್ ನಿರ್ದೇಶನದ ಈ ಬಿಗ್ ಬಜೆಟ್ ಆಕ್ಷನ್ ಡ್ರಾಮಾ ತೆರೆಗೆ ಬರಲು ಸಿದ್ಧವಾಗಿದ್ದು, ಈ ನಡುವೆ ನಟಿ ಆಶಿಕಾ ರಂಗನಾಥ್ ಚಿತ್ರದಲ್ಲಿ ತಾವು ಪೋಷಿಸಿರುವ ‘ಫೈಜಾ’ ಎಂಬ ಪಾತ್ರದ ಕುರಿತು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಆಶಿಕಾ, “ಚಿತ್ರದಲ್ಲಿ ನನ್ನದು ‘ಫೈಜಾ’ ಎಂಬ ಅತ್ಯಂತ ಬೋಲ್ಡ್, ನಿಷ್ಠುರ ಹಾಗೂ ಕಾಳಜಿರಹಿತ ( carefree) ಜೆನ್ ಝಿ (Gen Z) ಹುಡುಗಿಯ ಪಾತ್ರ. ಇಂದಿನ ಯುವ ಪೀಳಿಗೆಯನ್ನು ಪ್ರತಿನಿಧಿಸುವಂತಿರುವ ಈ ಪಾತ್ರದಲ್ಲಿ ನಟಿಸುವುದು ನನಗೆ ಅತ್ಯಂತ ರೋಮಾಂಚನಕಾರಿ ಅನುಭವ ನೀಡಿದೆ” ಎಂದು ಹೇಳಿದ್ದಾರೆ. ಆದರೆ, ಕಥೆಯ ಮುಖ್ಯ ತಿರುವುಗಳು ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಪಾತ್ರದ ಸಂಪೂರ್ಣ ವಿವರಗಳನ್ನು ಬಿಟ್ಟುಕೊಡಲು ಅವರು ನಿರಾಕರಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮತ್ತು ಟ್ರೇಲರ್‌ಗಳಲ್ಲಿ ತಮ್ಮ ಪಾತ್ರದ ಕುರಿತು ಯಾವುದೇ ಸುಳಿವು ನೀಡದಿರುವುದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಆಶಿಕಾ ಅಭಿಪ್ರಾಯಪಟ್ಟಿದ್ದಾರೆ. ಆಕ್ಷನ್ ಹಾಗೂ ಸಸ್ಪೆನ್ಸ್ ಹಿನ್ನೆಲೆಯ ಈ ಕಥೆಯಲ್ಲಿ ತಮ್ಮ ಪಾತ್ರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ತಿ ಹಾಗೂ ಆಶಿಕಾ ರಂಗನಾಥ್ ಜೊತೆಗೆ ಮಾಳವಿಕಾ ಮೋಹನನ್ ಮತ್ತು ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಸರ್ದಾರ್ 2’ ಸಿನಿಮಾವು ಸೆಪ್ಟೆಂಬರ್ 10, 2026 ರಂದು ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular