HomeIndiaಸೆಲ್ಫಿ ಹುಚ್ಚಿಗೆ ಬಲಿಯಾದ ಮತ್ತೊಬ್ಬ ಯುವಕ...! ಆನೆ ಮುಂದೆ ಹುಚ್ಚಾಟ ನಡೆಸಿರುವಾಗಲೇ ದುರಂತ

ಸೆಲ್ಫಿ ಹುಚ್ಚಿಗೆ ಬಲಿಯಾದ ಮತ್ತೊಬ್ಬ ಯುವಕ…! ಆನೆ ಮುಂದೆ ಹುಚ್ಚಾಟ ನಡೆಸಿರುವಾಗಲೇ ದುರಂತ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೋಚಂಪಲ್ಲಿ ಬಳಿ ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸುತ್ತಿದ್ದ 27 ವರ್ಷದ ಯುವಕನನ್ನು ಕಾಡಾನೆ ತುಳಿದು ಕೊಂದು ಹಾಕಿದೆ.

ಪಾಲಕೋಡ್ ಮೀಸಲು ಅರಣ್ಯದಿಂದ ಎರಡು ಆನೆಗಳು ಹೊರಬರುತ್ತಿರುವುದನ್ನು ಗಮನಿಸಿದ ರಾಮ್‌ಕುಮಾರ್ ಎಂಬ ಯುವಕ ಗುಡ್ಡದ ಕಡೆಗೆ ಹೋಗಿ ಸೆಲ್ಫಿಗಾಗಿ ಸಾಹಸ ಮಾಡಿದ್ದಾನೆ. ನಂತರ ಆನೆಯೊಂದರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಮಾರ್ಗ ಬದಲಿಸಿದ ಆನೆ, ರಾಮ್‌ಕುಮಾರ್‌ ಮೇಲೆ ದಾಳಿ ಮಾಡಿತು.

ಆತ ತಪ್ಪಿಸಿಕೊಳ್ಳುವ ಮುನ್ನವೇ ಆನೆ ತುಳಿದಿದ್ದು, ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎರಡು ಆನೆಗಳನ್ನು ಮತ್ತೆ ಕಾಡಿಗೆ ಓಡಿಸಿದ ನಂತರ ಅರಣ್ಯ ಇಲಾಖೆ ಆತನ ಶವವನ್ನು ಹೊರತೆಗೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದುರಂತ ಸಾವಿನ ನಂತರ ಅರಣ್ಯ ಇಲಾಖೆಯು ಕಾಡುಪ್ರಾಣಿಗಳಿಗೆ ಹತ್ತಿರವಾಗದಂತೆ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸಲು ಪ್ರಾರಂಭಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular