HomeAutoನಿಮ್ಮ ಡಿಪಿ ನೋಡಿ ನಾನು ಬಂದೆ ಎಂದು ಯುವತಿಗೆ ಹೇಳಿದ ರ್ಯಾಪಿಡೋ ಚಾಲಕ; ನೆಟ್ಟಿಗರ ಆಕ್ರೋಶ

ನಿಮ್ಮ ಡಿಪಿ ನೋಡಿ ನಾನು ಬಂದೆ ಎಂದು ಯುವತಿಗೆ ಹೇಳಿದ ರ್ಯಾಪಿಡೋ ಚಾಲಕ; ನೆಟ್ಟಿಗರ ಆಕ್ರೋಶ

ಮಹಿಳಾ ಪ್ರಯಾಣಿಕರೊಂದಿಗೆ ರ್ಯಾಪಿಡೋ ಚಾಲಕ ಅನುಚಿತವಾಗಿ ವರ್ತಿಸಿರೋ ಘಟನೆ ಬೆಳಕಿಗೆ ಬಂದಿದ್ದು ನೆಟ್ಟಿಗರು ಈ ಬಗ್ಗೆ ಚಾಲಕನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಯಾಣದ ಬಳಿಕ ಚಾಲಕ ವಾಟ್ಸ್ ಅಪ್ ನಲ್ಲಿ ಮಹಿಳೆಗೆ ಅನುಚಿತವಾಗಿ ಸಂದೇಶ ಕಳಿಸಿದ್ದಾನೆ. ವಾಟ್ಸಾಪ್ ಮೂಲಕ ತನ್ನ ಲೊಕೇಷನ್ ಹಂಚಿಕೊಂಡ ನಂತರ ರಾಪಿಡೋ ಬೈಕ್ ಚಾಲಕ ಮಹಿಳೆಗೆ ಕಿರುಕುಳ ನೀಡಿದ್ದಾನೆ.

ಮಹಿಳೆಯು ಟ್ವಿಟರ್ ನಲ್ಲಿ ಈ ಬಗ್ಗೆ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು ಚಾಲಕನು, ಆಗಲೇ ಮಲಗಿಬಿಟ್ಟಿದ್ದೀರಾ? ನಿಮ್ಮ ಡಿಪಿ ಮತ್ತು ವಾಯ್ಸ್ ಕೇಳಿದ ಬಳಿಕ ಅಷ್ಟು ದೂರ ಬರಲು ಒಪ್ಪಿದೆ. ಇಲ್ಲದಿದ್ದರೆ ಖಂಡಿತ ಬರುತ್ತಿರಲಿಲ್ಲ. ನನ್ನನ್ನು ಭಯ್ಯಾ ಎಂದು ಮಾತ್ರ ಕರೆಯಬೇಡಿ ಎಂದಿದ್ದಾನೆ. ಈ ಬಗ್ಗೆ ಮಹಿಳೆಯು ರ್ಯಾಪಿಡೋ ಕಂಪನಿಯನ್ನು ಉಲ್ಲೇಖಿಸಿ ಆಕ್ರೋಶ ಹೊರಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವರದಿಯಿಂದ ನೆಟ್ಟಿಗರು ಕೋಪಗೊಂಡಿದ್ದಾರೆ, ಅಂತಹ ಚಾಲಕರ ವಿರುದ್ಧ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಪಿಡೊಗೆ ಒತ್ತಾಯಿಸಿದ್ದಾರೆ. ಟ್ವೀಟ್ ವೈರಲ್ ಆದ ನಂತರ ರಾಪಿಡೋ ಕೇರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ.

“ಹಾಯ್, ಚಾಲಕನ ವೃತ್ತಿಪರತೆಯ ಕೊರತೆಯ ಬಗ್ಗೆ ತಿಳಿದುಕೊಳ್ಳುವುದು ನಮಗೆ ಅತ್ಯಂತ ನಿರಾಶಾದಾಯಕವಾಗಿದೆ ಮತ್ತು ನಾವು ಅದರ ಬಗ್ಗೆ ಕ್ಷಮೆಯಾಚಿಸುತ್ತೇವೆ. ಈ ವಿಷಯವನ್ನು ಆದ್ಯತೆಯ ಆಧಾರದ ಮೇಲೆ ಖಂಡಿತವಾಗಿ ಕ್ರಮಕೈಗೊಳ್ಳಲಾಗುವುದು. ದಯವಿಟ್ಟು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ರೈಡ್ ಐಡಿಯನ್ನು ಸಂದೇಶದ ಮೂಲಕ ಹಂಚಿಕೊಳ್ಳುತ್ತೀರಾ?” ಎಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular